Select Your Language

Notifications

webdunia
webdunia
webdunia
webdunia

ಸಿದ್ದರಾಮಯ್ಯ ಕೊಟ್ಟ ಅಕ್ಕಿ ತಿಂದು, ಮೋದಿಗೆ ವೋಟ್ ಹಾಕಿದ್ದಾರೆ- ಕೆ.ಎಚ್.ಮುನಿಯಪ್ಪ ಆಕ್ರೋಶ

ಸಿದ್ದರಾಮಯ್ಯ ಕೊಟ್ಟ ಅಕ್ಕಿ ತಿಂದು, ಮೋದಿಗೆ ವೋಟ್ ಹಾಕಿದ್ದಾರೆ- ಕೆ.ಎಚ್.ಮುನಿಯಪ್ಪ ಆಕ್ರೋಶ
ಕೋಲಾರ , ಭಾನುವಾರ, 30 ಜೂನ್ 2019 (08:11 IST)
ಕೋಲಾರ : ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡಿ ಗೆಲ್ಲಿಸಿದ ಮತದಾರರ ವಿರುದ್ಧ ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.




ಸಿದ್ದರಾಮಯ್ಯ ಕೊಟ್ಟ ಅಕ್ಕಿ ತಿಂದು, ಮೋದಿಗೆ ವೋಟು ಹಾಕಿರುವುದು ಎಂತಹ ದುರ್ದೈವ. ಸಿದ್ದರಾಮಯ್ಯ ಅವರು ರಾಜ್ಯದ ಜನರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಆದರೆ, ಮೋದಿ ಯಾರಿಗೂ ಉದ್ಯೋಗ ಕೊಟ್ಟಿಲ್ಲ, ನೋಟು ಅಮಾನ್ಯ, ಜಿಎಸ್‌ಟಿ ತಂದು ಜನರಿಗೆ ತೊಂದರೆ ಕೊಟ್ಟಿದ್ದಾರೆ. ಆದರೂ ಜನರು ಅವರಿಗೆ ವೋಟ್ ಹಾಕಿದ್ದಾರೆ ಎಂದು ಅವರು ತಮ್ಮ ನಿವಾಸದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮತದಾರರ ವಿರುದ್ಧ ಹರಿಹಾಯ್ದಿದ್ದಾರೆ.


ನಿರುದ್ಯೋಗ ಪ್ರಮಾಣ 2014-19ರ ಅವಧಿಯಲ್ಲಿ ಹೆಚ್ಚಾಗಿರುವುದು ಅಂಕಿ-ಅಂಶಗಳಿಂದ ಬಯಲಾಗಿದೆ. ಆದರೂ ಮೋದಿಯವರು ಪುಲ್ವಾಮಾ ಹಾಗೂ ಏರ್‌ ಸ್ಟ್ರೈಕ್‌ ಗಳಿಂದ ಜನರನ್ನು ದಿಕ್ಕುತಪ್ಪಿಸಿದರು. ಇವೆಲ್ಲವನ್ನೂ ಯುವಕರು ತಿಳಿದುಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ. 


Share this Story:

Follow Webdunia kannada

ಮುಂದಿನ ಸುದ್ದಿ

ತಾಯಿ ಹಕ್ಕಿ ತನ್ನ ಮರಿಗೆ ತಿನಿಸುತ್ತಿದ್ದ ಆ ವಸ್ತು ಏನೆಂದು ತಿಳಿದರೆ ಶಾಕ್ ಆಗ್ತೀರಾ?