Select Your Language

Notifications

webdunia
webdunia
webdunia
webdunia

ಮಂಡ್ಯ ಜಿಲ್ಲೆಯಾದ್ಯಂತ ತೀವ್ರಗೊಂಡ ಕಾವೇರಿ ಹೋರಾಟ: ಕೆಆರ್‌ಎಸ್‌ಗೆ ಮುತ್ತಿಗೆ

ಮಂಡ್ಯ ಜಿಲ್ಲೆಯಾದ್ಯಂತ ತೀವ್ರಗೊಂಡ ಕಾವೇರಿ ಹೋರಾಟ: ಕೆಆರ್‌ಎಸ್‌ಗೆ ಮುತ್ತಿಗೆ
ಮಂಡ್ಯ , ಮಂಗಳವಾರ, 6 ಸೆಪ್ಟಂಬರ್ 2016 (13:01 IST)
ಜಿಲ್ಲೆಯಾದ್ಯಂತ ಕಾವೇರಿ ಹೋರಾಟ ತೀವ್ರಗೊಂಡಿದ್ದು ಜಿಲ್ಲೆಯಾದ್ಯಂತ ಬಾರಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಮಂಡ್ಯ ನಗರಕ್ಕೆ ಸಿಆರ್‌ಪಿಎಫ್ ತುಕುಡಿಗಳು ಆಗಮಿಸಿದ್ದರಿಂದ ಪ್ರತಿಭಟನಾಕಾರರು ಕೆಂಡಾಮಂಡಲವಾಗಿದ್ದಾರೆ.
 
ಪ್ರತಿಭಟನಾಕಾರರ ತೀವ್ರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಸಿಆರ್‌ಪಿಎಫ್ ತುಕುಡಿಗಳನ್ನು ವಾಪಸ್ ಕಳುಹಿಸಿಕೊಡಲಾಗಿದೆ ಎಂದು ಮೂಲಗಳು ತಿಳಿಸಿವೆ.
 
ತಮಿಳುನಾಡು ಸಿಎಂ ಜಯಲಲಿತಾ ವಿರುದ್ಧ ವಾಗ್ದಾಳಿ ನಡೆಸಿರುವ ಫ್ರತಿಭಟನೆಕಾರರು, ಯಾವುದೇ ಕಾರಣಕ್ಕೂ ನೀರು ಬಿಡಬಾರದು ಎಂದು ಸರಕಾರವನ್ನು ಒತ್ತಾಯಿಸಿದ್ದಾರೆ.
 
ಸಂಜಯ್ ವೃತ್ತದಲ್ಲಿ ಜಮಾವಣೆಗೊಂಡಿರುವ ಸಾವಿರಾರು ರೈತರು ರಾಜ್ಯ ಸರಕಾರ ಮತ್ತು ತಮಿಳುನಾಡು ಸಿಎಂ ಜಯಲಲಿತಾ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
 
ಸರಕಾರಿ ಕಚೇರಿಗಳಿಗೆ ನುಗ್ಗಿದ ಪ್ರತಿಭಟನಾಕಾರರು ಸಿಬ್ಬಂದಿಯನ್ನು ಹೊರಗೆ ಕಳುಹಿಸಿ ಪೀಠೋಪಕರಣಗಳನ್ನು ಧ್ವಂಸಗೊಳಿಸಿದ ಘಟನೆ ವರದಿಯಾಗಿದೆ.

ಕೆಆರ್‌ಎಸ್ ಆಣೆಕಟ್ಟಿಗೆ ನುಗ್ಗಲು ಯತ್ನಿಸುತ್ತಿದ್ದ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರೆ, ಕೆಲವರು ರಸ್ತೆ ತಡೆ ನಡೆಸಿ ಟೈರ್‌ಗಳಿಗೆ ಬೆಂಕಿ ಹಚ್ಚಿ ತಮಿಳುನಾಡು ಮತ್ತು ರಾಜ್ಯ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಏಕ ಭಾರತ ಏಕ ಚುನಾವಣೆ: ನರೇಂದ್ರ ಮೋದಿ ಐಡಿಯಾಕ್ಕೆ ರಾಷ್ಟ್ರಪತಿ ವೋಟ್