ಬೆಂಗಳೂರು: ಈ ವರ್ಷ ಮಳೆ ಧಾರಾಕಾರವಾಗಿ ಸುರಿಯುತ್ತಿದೆ. ಇದರ ನಡುವೆ ಭಾರತೀಯ ಹವಾಮಾನ ಇಲಾಖೆ ಚಳಿಗಾಲದ ಬಗ್ಗೆಯೂ ಶಾಕಿಂಗ್ ವರದಿಯೊಂದನ್ನು ನೀಡಿದೆ.
ಈ ವರ್ಷ ಬೇಸಿಗೆಯೂ ವಿಪರೀತ ಶಾಖ ತಂದಿತ್ತು. ಅದೇ ರೀತಿ ಈಗ ಮಳೆಯೂ ವಿಪರೀತ ಎನ್ನುವಷ್ಟು ಸುರಿಯುತ್ತಿದೆ. ಈ ವರ್ಷದ ರಾಜ್ಯದಲ್ಲಿ ಕರಾವಳಿ ಜಿಲ್ಲೆಗಳಲ್ಲಿ ಅತೀ ಹೆಚ್ಚು ಮಳೆಯಾಗುತ್ತಿದೆ. ಜೊತೆಗೆ ಮಲೆನಾಡು, ಒಳನಾಡಿನಲ್ಲೂ ಕಡಿಮೆಯೇನೂ ಅಲ್ಲ.
ಹವಾಮಾನ ವರದಿಗಳ ಪ್ರಕಾರ ಅಕ್ಟೋಬರ್ ವರೆಗೂ ಈ ವರ್ಷ ಮಳೆಯ ವಾತಾವರಣ ಮುಂದುವರಿಯಲಿದೆ. ಮಳೆಯ ಜೊತೆಗೆ ಈ ವರ್ಷ ಚಳಿಗಾಲ ಹೇಗಿರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇದರ ಪ್ರಕಾರ ಈ ವರ್ಷ ಚಳಿಗಾಲವೂ ವಿಪರೀತ ಎನ್ನುವಷ್ಟು ಕೂಲ್ ಆಗಿರಲಿದೆ. ಹವಾಮಾನ ವರದಿಗಳ ಪ್ರಕಾರ ಈ ವರ್ಷ ನವಂಬರ್ ನಿಂದ ಫೆಬ್ರವರಿಯವರೆಗೆ ತೀವ್ರ ಚಳಿಯ ವಾತಾವರಣವಿರಲಿದೆ. ಅದರಲ್ಲೂ ಈ ವರ್ಷ ಚಳಿ ದಾಖಲೆಯ ಮಟ್ಟಕ್ಕೆ ತಲುಪಲಿದೆಯಂತೆ. ಹೀಗಾಗಿ ಮುಂಬರುವ ಹವಾಮಾನದ ಬಗ್ಗೆ ಎಚ್ಚರಿಕೆಯಿಂದಿರುವುದು ಉತ್ತಮ.