ಬೆಂಗಳೂರು: ಕಳೆದ ಕೆಲ ದಿನಗಳಿಂದ ರಾಜ್ಯದಲ್ಲಿ ಬಿಸಿಲ ತಾಪ ಏರುತ್ತಲೇ ಇದೆ. ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೂ ಒಂದೇ ರೀತಿಯ ಬಿಸಿಲ ತಾಪವಿದೆ.
ಭಾನುವಾರ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕನಿಷ್ಠ ತಾಪಮಾನವು 17 ° C (ಡಿಗ್ರಿ ಸೆಲ್ಸಿಯಸ್) ನಲ್ಲಿ ದಾಖಲಾಗಿದೆ ಮತ್ತು ಗರಿಷ್ಠ ತಾಪಮಾನವು 31 ° C (ಡಿಗ್ರಿ ಸೆಲ್ಸಿಯಸ್) ವರೆಗೆ ಹೋಗಿದೆ.
ಇದೇ ವಾತಾವರಣ ಈ ತಿಂಗಳ 25ರ ವರೆಗೆ ಇರಲಿದ್ದು, ತಿಂಗಳ ಕೊನೆಯಲ್ಲಿ ಮಳೆಯ ಮುನ್ಸೂಚನೆಯಿದೆ. ಬೆಂಗಳೂರು ನಗರದಲ್ಲಿ ಇಂದು ದಿನವಿಡೀ ಶುಭ್ರ ವಾತಾವರಣ ಸಾಧ್ಯವಾಗಬಹುದು.
ಬೆಂಗಳೂರು ನಗರದಲ್ಲಿ ನಿನ್ನೆಯ ಕನಿಷ್ಠ ತಾಪಮಾನ 18.15 ಡಿಗ್ರಿ ಸೆಲ್ಷಿಯಸ್ ದಾಖಲಾಗಿದೆ. ಗರಿಷ್ಠ ತಾಪಮಾನವು 30.55 ಸೆಲ್ಸಿಯಸ್ ಇದೆ. ತೇವಾಂಶವು 25% ದಾಖಲಾಗಿತ್ತು<>