Karnataka Weather: ಈ ವಾರ ಯಾವ ದಿನದಿಂದ ಯಾವ ದಿನದವರೆಗೆ ಮಳೆ ಇಲ್ಲಿದೆ ವಿವರ

Krishnaveni K
ಸೋಮವಾರ, 10 ಮಾರ್ಚ್ 2025 (08:49 IST)
ಬೆಂಗಳೂರು: ಕರ್ನಾಟಕದಲ್ಲಿ ಕಡು ಬಿಸಿಲಿನಿಂದ ತತ್ತರಿಸಿದ್ದ ಜನರಿಗೆ ತಂಪೆರಗಲು ವರುಣನ ಆಗಮನವಾಗುತ್ತಿದೆ. ಈ ದಿನದಿಂದ ಈ ದಿನದವರೆಗೆ ಮಳೆಯಾಗಲಿದೆ ಎಂದು ಹವಾಮಾನ ವರದಿಗಳು ಹೇಳಿವೆ.

ರಾಜ್ಯದಲ್ಲಿ ಕಳೆದ ವಾರವಿಡೀ ವಿಪರೀತ ಬಿಸಿಲು, ಸೆಖೆಯ ವಾತಾವರಣವಿತ್ತು. ತಾಪಮಾನ ರಾಜ್ಯಾದ್ಯಂತ ಸರಾಸರಿ 35 ರಿಂದ 40 ಡಿಗ್ರಿಯವರೆಗೂ ಇತ್ತು. ಆದರೆ ಸತತ ಉರಿಬಿಸಿಲಿನಿಂದ ತತ್ತರಿಸಿದ್ದ ಜನಕ್ಕೆ ಈಗ ಮಳೆಯ ಸುದ್ದಿ ನೆಮ್ಮದಿ ನೀಡಲಿದೆ.

ಹವಾಮಾನ ವರದಿಗಳ ಪ್ರಕಾರ ಈ ವಾರ ಎರಡರಿಂದ ಮೂರು ದಿನಗಳವರೆಗೆ ಸಣ್ಣ ಮಟ್ಟಿಗೆ ಮಳೆಯಾಗುವ ಸಾಧ್ಯತೆಗಳಿವೆ. ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ನಾಳೆಯಿಂದ ಮೂರು ದಿನಗಳ ಕಾಲ ಮಳೆಯಾಗುವ ಸಾಧ್ಯತೆಯಿದೆ ಎಂದು ವರದಿಗಳು ಹೇಳುತ್ತಿವೆ.

ಬೆಂಗಳೂರು, ಮಂಡ್ಯ, ಮೈಸೂರು ಸುತ್ತಮುತ್ತಲ ಜಿಲ್ಲೆಗಳಲ್ಲಿ ಮಂಗಳವಾರ ಮಳೆಯಾಗುವ ಸೂಚನೆಯಿದೆ. ಇನ್ನು, ವಿಪರೀತ ಬಿಸಿಲು, ಉಷ್ಣ ಅಲೆಯಿಂದ ತತ್ತರಿಸಿರುವ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿಯಲ್ಲಿ ಗುರುವಾರ ಮತ್ತು ಶನಿವಾರ ಮಳೆಯ ಸೂಚನೆಯಿದೆ. ಆದರೆ ರಾಯಚೂರು, ಬಳ್ಳಾರಿಯಂತಹ ಉತ್ತರದ ರಾಜ್ಯಗಳಲ್ಲಿ ಯಥಾ ಪ್ರಕಾರ ಬಿಸಿಲಿನ ವಾತಾವರಣ ಮುಂದುವರಿಯಲಿದೆ ಎಂದು ತಿಳಿದುಬಂದಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಯಾವತ್ತೂ ಎಸಿ ಕಾರಿನಲ್ಲಿ ಕೂತಿಲ್ಲ ಅಣ್ಣ.. ಬಡ ಮಕ್ಕಳ ರಿಕ್ವೆಸ್ಟ್ ಗೆ ಐಷಾರಾಮಿ ಕಾರಿನ ಒಡೆಯ ಮಾಡಿದ್ದೇನು Video

ಇವಳು ಮಗುವಲ್ಲ ರೌಡಿ ಬೇಬಿ.. ಸಹಪಾಠಿ ಹುಡುಗನಿಗೆ ಬಾಸುಂಡೆ ಬರುವಂತೆ ಹೊಡೆದ್ಳು: ಸಿಸಿಟಿವಿ ನೋಡಿ ಶಾಕ್ Video

ಸಚಿವ ಸ್ಥಾನಕ್ಕೆ ಕಾಯುತ್ತಿದ್ದವರಿಗೆ ಶಾಕ್ ಕೊಟ್ಟ ರಾಹುಲ್ ಗಾಂಧಿ ನಿರ್ಧಾರ

ಮಂಗಳೂರಿನಲ್ಲಿ ಹಾಡಹಗಲು ಸಾರ್ವಜನಿಕವಾಗಿ ಹುಡುಗಿಯನ್ನು ಕೊಂದ ಮಾಜಿ ಲವ್ವರ್: ಭೀಕರ ವಿಡಿಯೋ ವೈರಲ್ Video

Karnataka Weather: ಕರ್ನಾಟಕದಲ್ಲಿ ಮುಂದಿನ 24 ಗಂಟೆಗಳಲ್ಲಿ ಹವಾಮಾನ ಬದಲಾವಣೆ ಗಮನಿಸಿ

ಮುಂದಿನ ಸುದ್ದಿ
Show comments