ಬೆಂಗಳೂರು: ಕರ್ನಾಟಕದಲ್ಲಿ ಕಳೆದ ಕೆಲವು ದಿನಗಳಿಂದ ವಿಪರೀತ ಬಿಸಿಲಿನ ವಾತಾವರಣವಿದೆ. ಇದರ ನಡುವೆ ಜನರಿಗೆ ಮಳೆಯ ಗುಡ್ ನ್ಯೂಸ್ ಸಿಕ್ಕಿದೆ. ಈ ದಿನ ಮಳೆಯಾಗುವುದು ಖಚಿತ ಎಂದು ಹವಾಮಾನ ವರದಿಗಳು ಹೇಳುತ್ತಿವೆ. ಹಾಗಿದ್ದರೆ ಎಲ್ಲೆಲ್ಲಿ ಮಳೆಯಾಗಲಿದೆ ಇಲ್ಲಿದೆ ವಿವರ.
ರಾಜ್ಯದಲ್ಲಿ ಜನ ಈಗ ಸುಡು ಬಿಸಿಲಿನಿಂದ ತತ್ತರಿಸಿದ್ದಾರೆ. ಒಮ್ಮೆ ಮಳೆ ಬಂದರೆ ಸಾಕು ಎನ್ನುವಂತಾಗಿದೆ ಪರಿಸ್ಥಿತಿ. ಈಗಲೇ ಮೇ ತಿಂಗಳ ತಾಪಮಾನ ಕಂಡುಬರುತ್ತಿದೆ. ಇದರ ನಡುವೆ ಹವಾಮಾನ ವರದಿಗಳು ಸದ್ಯದಲ್ಲೇ ಮಳೆಯಿದೆ ಎನ್ನುತ್ತಿದೆ.
ಹವಾಮಾನ ವರದಿ ಪ್ರಕಾರ ಮುಂದಿನ ವಾರ ಅಂದರೆ ಮಂಗಳವಾರ ಮಳೆಯಾಗಲಿದೆ ಎಂದು ಹವಾಮಾನ ವರದಿಗಳು ಹೇಳುತ್ತಿವೆ. ರಾಜ್ಯ ರಾಜಧಾನಿ ಬೆಂಗಳೂರು, ಮಂಡ್ಯ, ಮೈಸೂರು, ಚಾಮರಾಜನಗರ ಸೇರಿದಂತೆ ಸುತ್ತಮುತ್ತಲು ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ವರದಿಗಳು ಸೂಚಿಸುತ್ತಿವೆ.
ನಿನ್ನೆ ಬೆಳಿಗ್ಗೆ ಮತ್ತು ಸಂಜೆ ಕೊಂಚ ಮೋಡ ಕವಿದ ವಾತಾವರಣವಿತ್ತು. ಇಂದೂ ತಾಪಮಾನ ಯಥಾ ಪ್ರಕಾರ ರಾಜ್ಯದಲ್ಲಿ ಸರಾಸರಿ 35 ಡಿಗ್ರಿಯಷ್ಟು ಏರಿಕೆಯಾಗಲಿದೆ. ಕನಿಷ್ಠ 20 ಡಿಗ್ರಿಯಷ್ಟಿರಲಿದೆ. ಇನ್ನು ನಾಲ್ಕು ದಿನಗಳು ತಾಪಮಾನ ಇದೇ ರೀತಿ ಮುಂದುವರಿಯಲಿದೆ ಎಂದು ಹವಾಮಾನ ವರದಿಗಳು ಹೇಳುತ್ತಿವೆ.