Daily Horoscope
✕

Karnataka Weather: ಈ ವಾರವೂ ರಣ ಮಳೆ ಇರುತ್ತಾ ಇಲ್ಲಿದೆ ವಾರದ ಹವಾಮಾನ ವರದಿ

Krishnaveni K
ಸೋಮವಾರ, 21 ಜುಲೈ 2025 (08:35 IST)
ಬೆಂಗಳೂರು: ಕಳೆದ ವಾರ ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಕಡೆ ಭಾರೀ ಮಳೆಯಾಗಿತ್ತು. ಈ ವಾರವೂ ರಣ ಮಳೆ ಮುಂದುವರಿಯುತ್ತಾ? ಈ ವಾರದ ಹವಾಮಾನ ವರದಿ ಇಲ್ಲಿದೆ ನೋಡಿ.

ಕರಾವಳಿ, ಮಲೆನಾಡು ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ವಾರಂತ್ಯದಲ್ಲೂ ಭಾರೀ ಮಳೆಯಾಗಿತ್ತು. ಹವಾಮಾನ ವರದಿ ಪ್ರಕಾರ ಜುಲೈ 23 ರವರೆಗೂ ರಾಜ್ಯದಲ್ಲಿ ಭಾರೀ ಮಳೆಯ ವಾತಾವರಣ ಮುಂದುವರಿಯಲಿದೆ ಎನ್ನಲಾಗಿದೆ.

ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಗುರುವಾರದವರೆಗೂ ಭಾರೀ ಮಳೆ ಮುಂದುವರಿಯಲಿದೆ. ವಾರಂತ್ಯಕ್ಕೆ ಮಳೆಯ ಅಬ್ಬರ ಕೊಂಚ ಮಟ್ಟಿಗೆ ಕಡಿಮೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ. ಬೆಂಗಳೂರಿನಲ್ಲೂ ಶುಕ್ರವಾರದವರೆಗೆ ಮೋಡ ಕವಿದ ವಾತಾವರಣ, ಮಳೆ ಕಂಡುಬರುವುದು.

ಉಳಿದಂತೆ ಚಿಕ್ಕಮಗಳೂರು, ಕೊಡಗು, ಹಾಸನ, ಬೆಂಗಳೂರು, ಮೈಸೂರು, ಮಂಡ್ಯ, ಚಾಮರಾಜನಗರ, ಹಾವೇರಿ, ರಾಯಚೂರು, ಬೆಳಗಾವಿ, ಶಿವಮೊಗ್ಗ, ಗದಗ, ಬೀದರ್, ತುಮಕೂರು, ಚಿತ್ರದುರ್ಗ, ಕೊಪ್ಪಳ, ದಾವಣಗೆರೆ ಮೊದಲಾದ ಜಿಲ್ಲೆಗಳಲ್ಲಿ ವಾರವಿಡೀ ಸಾಧಾರಣ ಮಳೆಯಾಗಲಿದೆ ಎಂದು ತಿಳಿದುಬಂದಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಇನ್ನೊಬ್ಬಳೊಂದಿಗೆ ಸಿಕ್ಕಿಬಿದ್ದ ಪ್ರಿಯಕರ: ಚಕಾರ ಎತ್ತಿದ ಪ್ರೇಯಸಿ ಮೇಲೆಯೇ ಕಾರು ಹರಿಸಿ ಪರಾರಿ Video

ಅಬ್ಬಾ ನಿಜಕ್ಕೂ ಭಯಾನಕ… ಎಕ್ಸ್ ಪ್ರೆಸ್ ರೈಲಿಗೆ ಅಡಿಗೆ ಸಿಲುಕಿದವು ಹತ್ತಾರು ಮೇಕೆಗಳು Video

ಒಂದೇ ಕಪ್ಪು ಚುಕ್ಕೆಯಿಲ್ಲದೇ ದೇಶ ಮುನ್ನಡೆಸುತ್ತಿದ್ದಾರೆ ಮೋದಿ ಜೀ: ವಿಜಯೇಂದ್ರ ಹೊಗಳಿಕೆ

ಗಣೇಶ ಪ್ರತಿಷ್ಠಾಪನೆ ಆಗುವ ಮುನ್ನ ಚಪ್ಪಲಿ ಹಾಕಿಕೊಂಡರೆ ತಪ್ಪಿಲ್ಲ: ಯದುವೀರ್ ಒಡೆಯರ್

ಸ್ನಾನಕ್ಕೆ ಹೋಗ್ತೀನಿ ಎಂದಿದ್ದ 23 ವರ್ಷದ ಯುವತಿ ಹಠಾತ್ ಸಾವು: ಹಾಸನದ ಲಾಡ್ಜ್ನಲ್ಲಿ ನಡೆದಿದ್ದೇನು

ಮುಂದಿನ ಸುದ್ದಿ
Show comments