Select Your Language

Notifications

webdunia
webdunia
webdunia
webdunia

Karnataka Weather: ಮಾರ್ಚ್ ನಲ್ಲಿ ಮಳೆ ಬರಲಿದೆಯೇ, ಇಲ್ಲಿದೆ ಹವಾಮಾನ ವರದಿ

Bangalore Rains

Krishnaveni K

ಬೆಂಗಳೂರು , ಶನಿವಾರ, 1 ಮಾರ್ಚ್ 2025 (08:24 IST)
ಬೆಂಗಳೂರು: ಕರ್ನಾಟಕದಾದ್ಯಂತ ಬಿಸಿಲಿನ ಝಳದಿಂದ ಜನರು ಹೈರಾಣಾಗಿದ್ದು ಮಳೆಗಾಗಿ ಕಾಯುವಂತಾಗಿದೆ. ಮಾರ್ಚ್ ತಿಂಗಳು ಆರಂಭವಾಗಿದ್ದು ಈ ತಿಂಗಳು ಮಳೆಯ ಸೂಚನೆಯಿದೆಯೇ ಇಲ್ಲಿದೆ ಹವಾಮಾನ ವರದಿ.

ಫೆಬ್ರವರಿ ಪೂರ್ತಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಳೆಯಾಗಲಿಲ್ಲ. ಕೇವಲ ಕರಾವಳಿಯ ಕೆಲವೊಂದು ಕಡೆ ಮಾತ್ರ ತುಂತುರು ಹನಿಯಾಗಿದ್ದು ಬಿಟ್ಟರೆ ತಾಪಮಾನ ದಿನೇ ದಿನೇ ಏರಿಕೆಯಾಗುತ್ತಲೇ ಇತ್ತು.

ಮಾರ್ಚ್ ತಿಂಗಳಲ್ಲಿ ಈ ತಾಪಮಾನ ಇನ್ನಷ್ಟು ಏರಿಕೆಯಾಗುವ ಸೂಚನೆಯಿದೆ. ಈ ತಿಂಗಳಿನಿಂದ ತಾಪಮಾನ ಸರಾಸರಿ 40 ಡಿಗ್ರಿಗೆ ಏರಿಕೆಯಾಗಲಿದೆ. ಇದರ ಸೂಚನೆ ಇಂದಿನಿಂದಲೇ ಲಭ್ಯವಾಗಿದ್ದು ವಿಪರೀತ ಬಿಸಿಲು ಕಂಡುಬರುತ್ತಿದೆ.

ತಾಪಮಾನದಲ್ಲಿ ಈ ತಿಂಗಳು ಭಾರೀ ಏರಿಕೆಯಾದರೂ ಕೊನೆಯಲ್ಲಿ ಸಣ್ಣ ಮಳೆಯಾಗುವ ಸಾಧ್ಯತೆಯೂ ಇದೆ ಎಂದು ಹವಾಮಾನ ವರದಿಗಳು ಹೇಳುತ್ತಿವೆ. ತಾಪಮಾನ ವಿಪರೀತ ಏರಿಕೆಯಾಗುವುದರಿಂದ ರಾಜ್ಯದ ಕೆಲವು ಭಾಗಗಳಿಗೆ ವರುಣನ ಆಗಮನ ಸಾಧ್ಯತೆಯಿದೆ ಎಂದು ಹೇಳಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿಯ ಕಿರುಕುಳ: ಅತುಲ್ ಸುಭಾಷ್ ಪ್ರಕರಣದಂತೆ ವಿಡಿಯೋ ಮಾಡಿಟ್ಟು ಟೆಕ್ಕಿ ಆತ್ಮಹತ್ಯೆಗೆ ಶರಣು