Publish Date: Mon, 23 Jun 2025 (08:30 IST)
Updated Date: Mon, 23 Jun 2025 (08:33 IST)
ಬೆಂಗಳೂರು: ಕಳೆದ ವಾರ ಆರಂಭದಲ್ಲಿ ಮಳೆ ಅಬ್ಬರಿಸಿದ್ದರೂ ವಾರದ ಮಧ್ಯಭಾಗದಿಂದ ಮಳೆ ಕಡಿಮೆಯಾಗಿತ್ತು. ಈ ವಾರವಿಡೀ ಮಳೆಯಿರುತ್ತದೆಯೇ, ಯಾವ ಜಿಲ್ಲೆಗೆ ಹೆಚ್ಚು ಮಳೆ ಸಾಧ್ಯತೆ ಇಲ್ಲಿದೆ ವಿವರ.
ಈ ವಾರವೂ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಳೆ ಸಾಧ್ಯತೆ ಕಡಿಮೆ. ಬಹುತೇಕ ವಾರವಿಡೀ ಮೋಡ ಕವಿದ ವಾತಾವರಣ ಕೆಲವೊಮ್ಮೆ ಮಾತ್ರ ತುಂತುರು ಮಳೆಯಾಗಲಿದೆ. ಅದು ಬಿಟ್ಟರೆ ಈ ವಾರ ಬೆಂಗಳೂರಿಗೆ ಭಾರೀ ಮಳೆಯ ಮುನ್ಸೂಚನೆಯೇನೂ ಕಂಡುಬರುತ್ತಿಲ್ಲ. ಕಳೆದ ವಾರವೂ ಮೋಡ ಕವಿದ ವಾತಾವರಣವಿತ್ತು.
ರಾಜ್ಯದಲ್ಲಿ ಕಳೆದ ವಾರ ಹೆಚ್ಚು ಮಳೆಯಾಗಿದ್ದು ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ. ಈ ಎರಡು ಜಿಲ್ಲೆಗಳಿಗೆ ಈ ವಾರವೂ ಮಳೆಯ ಮುನ್ಸೂಚನೆಯಿದೆ. ಹಾಗಿದ್ದರೂ ವಾರಂತ್ಯದಲ್ಲಿ ಈ ಎರಡು ಜಿಲ್ಲೆಗಳಲ್ಲಿ ಮಳೆ ಕೊಂಚ ತಗ್ಗಿತ್ತು. ಈ ವಾರದ ಆರಂಭದಲ್ಲೂ ಈ ಎರಡು ಜಿಲ್ಲೆಗಳಲ್ಲಿ ಮಳೆ ಆರಂಭದ ಎರಡು ದಿನ ಕಡಿಮೆಯಾಗಿರಲಿದೆ. ಆದರೆ ಬುಧವಾರದಿಂದ ಮತ್ತೆ ಮಳೆ ಬಿರುಸಾಗಲಿದೆ. ದಕ್ಷಿಣ ಕನ್ನಡದಲ್ಲಿ ಬುಧವಾರದಿಂದ ತೊಡಗಿ ವಾರಂತ್ಯದವರೆಗೂ ಭಾರೀ ಮಳೆಯ ಸೂಚನೆಯಿದೆ. ಉಡುಪಿಯಲ್ಲಿ ಇಂದೂ ಭಾರೀ ಮಳೆಯ ಸೂಚನೆಯಿದೆ.
ಉಳಿದಂತೆ ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ತುಮಕೂರು, ಚಿತ್ರದುರ್ಗ, ಹಾವೇರಿ, ಬಾಗಲಕೋಟೆ, ಹುಬ್ಬಳ್ಳಿ, ಧಾರವಾಡ, ಗದಗ, ಕೊಪ್ಪಳ, ವಿಜಯಪುರ ಜಿಲ್ಲೆಗಳಲ್ಲಿ ವಾರವಿಡೀ ಸಣ್ಣ ಮಟ್ಟಿಗೆ ಮಳೆಯಾಗಲಿದೆ. ಉಳಿದ ಜಿಲ್ಲೆಗಳಲ್ಲಿ ಬಹುತೇಕ ಮೋಡ ಕವಿದ ವಾತಾವರಣವಿರಲಿದೆ.