ಕರ್ನಾಟಕ ಹವಾಮಾನ: ಇಂದಿನ ಹವಾಮಾನ ಬದಲಾವಣೆಯನ್ನು ತಪ್ಪದೇ ಗಮನಿಸಿ

Krishnaveni K
ಶನಿವಾರ, 15 ಫೆಬ್ರವರಿ 2025 (09:11 IST)
ಬೆಂಗಳೂರು: ರಾಜ್ಯದಲ್ಲಿ ಈಗ ಬೇಸಿಗೆ ಮತ್ತು ಚಳಿಗಾಲದ ನಡುವೆ ಕಣ್ಣಾಮುಚ್ಚಾಲೆ ನಡೆಯುತ್ತಿದೆ. ಇಂದಿನ ಹವಾಮಾನ ಬದಲಾವಣೆಯನ್ನು ತಪ್ಪದೇ ಗಮನಿಸಿ.

ಕಳೆದ ಎರಡು ವಾರದಿಂದ ರಾಜ್ಯದಲ್ಲಿ ಬಿಸಿಲಿನ ಝಳ ಹೆಚ್ಚಿದೆ. ಆದರೆ ರಾತ್ರಿ ವೇಳೆ ತಂಪು ವಾತಾವರಣವಿತ್ತು. ಇದರಿಂದಾಗಿ ಚಳಿ ಮತ್ತು ಸೆಖೆ ನಡುವೆ ಕಣ್ಣಾಮುಚ್ಚಾಲೆಯೇ ನಡೆಯುತ್ತಿತ್ತು. ಆದರೆ ಇಂದಿನಿಂದ ವಾತಾವರಣದಲ್ಲಿ ಮತ್ತೆ ಬದಲಾವಣೆ ಕಾಣಬಹುದು.

ಬೆಳಗ್ಗಿನ ಹೊತ್ತು ಸ್ವಲ್ಪ ತಂಪಾದ ವಾತಾವರಣವಿದ್ದರೂ ಇಂದಿನಿಂದ ಬಿಸಿಲಿನ ಬೇಗೆ ಹೆಚ್ಚಾಗಲಿದೆ. ಇಂದು ಗರಿಷ್ಠ ತಾಪಮಾನ 32 ರಿಂದ 35 ಡಿಗ್ರಿಯವರೆಗೆ ತಲುಪುವ ನಿರೀಕ್ಷೆಯಿದೆ. ಹಗಲು ಶುಭ್ರ ಆಕಾಶವಿರಲಿದ್ದು, ವಿಪರೀತ ಬಿಸಿಲಿನ ಝಳ ಕಂಡುಬರಲಿದೆ.

ನಿನ್ನೆಯೂ ಗರಿಷ್ಠ ತಾಪಮಾನ 35 ಡಿಗ್ರಿಯಷ್ಟು ತಲುಪಿತ್ತು. ಇಂದೂ ಕೂಡಾ ಅದೇ ವಾತಾವರಣವಿರಲಿದೆ. ಜೊತೆಗೆ ರಾತ್ರಿ ಚಳಿಯ ವಾತಾವರಣ ಕಡಿಮೆಯಾಗಲಿದೆ. ಮುಂದಿನ ನಾಲ್ಕೈದು ದಿನಗಳವರೆಗೆ ಇದೇ ಹವಾಮಾನ ಮುಂದುವರಿಯಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ತಿಂಡಿ ಖರೀದಿಸುತ್ತಿದ್ದವಳು ಕ್ಷಣಾರ್ಧದಲ್ಲಿ ಸಾವು: ಸಣ್ಣ ತಪ್ಪಿನಿಂದ ರೈಲಿನಡಿಗೆ ಸಿಲುಕಿ ಪೀಸ್ ಪೀಸ್ Video

ದೆಹಲಿಯ ಜಂತರ್ ಮಂಥರ್ ನಲ್ಲಿ ಜಿರಳೆ ಪಾರ್ಟಿ ಸದಸ್ಯರ ಮೇಲೆ ಲಾಠಿ ಚಾರ್ಜ್: ದಿಕ್ಕಾಪಾಲಾಗಿ ಓಡಿದ ಸಿಜೆಪಿ ಸದಸ್ಯರು Video

ಶಾಲೆಗೆ ವಿದ್ಯಾರ್ಥಿ ಹನುಮಾನ್ ಚಾಲೀಸಾ ತಂದಿದ್ದಕ್ಕೆ ಬಿಸಾಕಿದ ಶಿಕ್ಷಕಿ: ಮುಂದೇನಾಯ್ತು ನೋಡಿ Video

ಗೃಹಲಕ್ಷ್ಮಿ ಹಣ ಕರೆಕ್ಟ್ ಆಗಿ ಖಾತೆಗೆ ಬರಬೇಕೆಂದರೆ ಈ ಎರಡು ನಿಯಮ ಪಾಲಿಸಬೇಕು

Karnataka weather: ವಾರವಿಡೀ ರಾಜ್ಯದಲ್ಲಿ ಮಳೆಯಿರುತ್ತಾ, ಇಲ್ಲಿದೆ ಹವಾಮಾನ ವರದಿ

ಮುಂದಿನ ಸುದ್ದಿ
Show comments