Select Your Language

Notifications

webdunia
webdunia
webdunia
webdunia

ಎಸ್ಇಪಿ ವರದಿ ಜಾರಿಗೆ ಬಂದ್ರೆ ಮುಸ್ಲಿಮರಿಗೆ ಶಿಕ್ಷಣದಲ್ಲೂ ಸ್ಪೆಷಲ್ ಸ್ಥಾನ: ಭಾರೀ ಆಕ್ರೋಶ

Karnataka Educaton policy

Krishnaveni K

ಬೆಂಗಳೂರು , ಮಂಗಳವಾರ, 12 ಆಗಸ್ಟ್ 2025 (10:04 IST)
ಬೆಂಗಳೂರು: ಕರ್ನಾಟಕ ಶಿಕ್ಷಣ ನೀತಿ ರೂಪಿಸಲು ಸರ್ಕಾರ ರೂಪಿಸಿದ್ದ ಸಮಿತಿಯ  ವರದಿ ಬಹಿರಂಗವಾಗಿದೆ. ಈ ಸಮಿತಿ ವರದಿಯಲ್ಲೂ ಮುಸ್ಲಿಂ ಓಲೈಕೆ ಮಾಡಲಾಗಿದೆ ಎಂದು ಭಾರೀ ಆಕ್ರೋಶಕ್ಕೊಳಗಾಗಿದೆ.

ಸಮಿತಿಯ ವರದಿಯಲ್ಲಿ ಮುಸ್ಲಿಮರ ಶಿಕ್ಷಣಕ್ಕಾಗಿ ಪ್ರೋತ್ಸಾಹ ನೀಡುವಂತಹ ಅಂಶಗಳನ್ನು ಸೇರಿಸಲಾಗಿದೆ. ಅಲ್ಪಸಂಖ್ಯಾತರು ಎಂದಲ್ಲ, ವಿಶೇಷವಾಗಿ ಮುಸ್ಲಿಮರು ಎಂದೇ ಉಲ್ಲೇಖಿಸಲಾಗಿದೆ. ಇದು ಹಲವರ ಕೆಂಗಣ್ಣಿಗೆ ಗುರಿಯಾಗಿದೆ.

ಕಡಿಮೆ ಆದಾಯವಿರುವ ಮುಸ್ಲಿಮ್ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹ, ಆರ್ಥಿಕ ಬೆಂಬಲ ನೀಡಲು ಶಿಫಾರಸ್ಸು ಮಾಡಲಾಗಿದೆ. ಇದು ಹಿಂದೂ ಪರ ಸಂಘಟನೆಗಳು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಇದರ ಭಾಗವಾಗಿ ಮುಂದೆ ಮುಸ್ಲಿಮರಿಗೆ ಶಿಕ್ಷಣದಲ್ಲೂ ಮೀಸಲಾತಿ ನೀಡಬಹುದು. ಇದರಿಂದ ಇತರೆ ಸಮುದಾಯಗಳಿಗೆ ಅನ್ಯಾಯ ಮಾಡಿದಂತಾಗುತ್ತದೆ. ಕೇವಲ ಮುಸ್ಲಿಮರಲ್ಲಿ ಮಾತ್ರ ಬಡವರಿದ್ದಾರೆಯೇ? ಮುಸ್ಲಿಮರಿಗೆ ಮಾತ್ರ ಈ ಸವಲತ್ತುಗಳು ಯಾಕೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಿಕ್ಷಣ ವ್ಯವಸ್ಥೆಯಲ್ಲಿ ಸಮುದಾಯ, ಧರ್ಮಕ್ಕೆ ಸ್ಥಾನವಿಲ್ಲ. ಒಂದು ಧರ್ಮದವರಿಗೆ ಮಾತ್ರ ಶಿಕ್ಷಣಕ್ಕೆ ಅನುಕೂಲ ಮಾಡಿಕೊಡುವುದು ಆರ್ ಟಿಇ ಕಾನೂನು ಉಲ್ಲಂಘನೆಯಾಗುತ್ತದೆ. ಹೀಗಾಗಿ ಎಸ್ಇಪಿ ವರದಿ ಜಾರಿಗೆ ಬರಬಾರದು ಎಂದು ಆಗ್ರಹ ಕೇಳಿಬಂದಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಕೆಎನ್ ರಾಜಣ್ಣ ತಲೆದಂಡಕ್ಕೆ ರಿಯಲ್ ಕಾರಣ ಇಲ್ಲಿದೆ: ಇವರಿಂದಲೇ ಎಲ್ಲಾ ಆಗಿದ್ದು