Select Your Language

Notifications

webdunia
webdunia
webdunia
webdunia

Karnataka PUC Result: ಪಿಯು ಪರೀಕ್ಷೆ ಫೇಲ್ ಆಗಿದ್ದೀರಾ, ಪರೀಕ್ಷೆ 2 ಬರೆಯುವವರಿಗೆ ಗುಡ್ ನ್ಯೂಸ್

Madhu Bangarappa

Krishnaveni K

ಬೆಂಗಳೂರು , ಮಂಗಳವಾರ, 8 ಏಪ್ರಿಲ್ 2025 (15:05 IST)
ಬೆಂಗಳೂರು: ಇಂದು ಕರ್ನಾಟಕ ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಪರೀಕ್ಷೆ ಫೇಲ್ ಆದವರಿಗೆ ಪರೀಕ್ಷೆ 2 ಬರೆಯುವವರಿಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಗುಡ್ ನ್ಯೂಸ್ ಕೊಟ್ಟಿದ್ದಾರೆ.

ಇದೀಗ ದ್ವಿತೀಯ ಪಿಯು ಪರೀಕ್ಷೆ 1 ರ ಫಲಿತಾಂಶ ಪ್ರಕಟವಾಗಿದೆ. ಕೆಲವರು ಪರೀಕ್ಷೆ 2 ಬರೆಯಲು ಸಿದ್ಧರಾಗಿದ್ದಾರೆ. ಫೇಲ್ ಆದವರಿಗೆ ಇದು ಉತ್ತಮ ಅವಕಾಶವಾಗಿದೆ. ಆದರೆ ಇದುವರೆಗೆ ಪರೀಕ್ಷೆ 2 ಗೆ ಪ್ರತೀ ಸಬ್ಜೆಕ್ಟ್ ಗೆ ಇಷ್ಟು ಅಂತ ಶುಲ್ಕ ನೀಡಬೇಕಾಗಿತ್ತು.

ಆದರೆ ಈ ಬಾರಿಯಿಂದ ಪರೀಕ್ಷೆ 2 ಬರೆಯುವವರಿಗೆ ಯಾವುದೇ ಶುಲ್ಕ ವಿಧಿಸಲ್ಲ. ಫ್ರೀ ಆಗಿ ಪರೀಕ್ಷೆ ಬರೆಯಬಹುದು ಎಂದು ಸಚಿವ ಮಧು ಬಂಗಾರಪ್ಪ ಇಂದು ಫಲಿತಾಂಶ ಪ್ರಕಟ ವೇಳೆ ಪತ್ರಿಕಾಗೋಷ್ಠಿಯಲ್ಲಿ ಗುಡ್ ನ್ಯೂಸ್ ನೀಡಿದ್ದಾರೆ.

ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪರೀಕ್ಷೆ 2, ಮತ್ತು ಪರೀಕ್ಷೆ 3 ಏರ್ಪಡಿಸಲಾಗುತ್ತದೆ. ಇದಕ್ಕೆ ಯಾವುದೇ ಶುಲ್ಕವಿರಲ್ಲ. ಸದ್ಯದಲ್ಲೇ ವೇಳಾಪಟ್ಟಿ ಪ್ರಕಟಿಸುತ್ತೇವೆ. ಹೀಗಾಗಿ ಅನುತ್ತೀರ್ಣರಾದವರು ನಿರಾಶರಾಗಬೇಕಿಲ್ಲ ಎಂದು ಸಚಿವರು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಲಾರಿ ಡ್ರೈವರ್ ಪುತ್ರಿ ರಾಜ್ಯಕ್ಕೆ ಟಾಪರ್‌: ಕಲಾ ವಿಭಾಗದಲ್ಲಿ 597 ಅಂಕ ಬಾಚಿಕೊಂಡ ಸಂಜನಾಬಾಯಿ