Publish Date: Wed, 25 Feb 2026 (09:16 IST)
Updated Date: Wed, 25 Feb 2026 (09:22 IST)
ಬೆಂಗಳೂರು: ರಾಜ್ಯ ಕಾಂಗ್ರೆಸ್ ನಲ್ಲಿ ಸಿಎಂ ಬದಲಾವಣೆ ಚರ್ಚೆ ಬೆನ್ನಲ್ಲೇ ಹೈಕಮಾಂಡ್ ಗೆ ಈಗ ಮೂರು ಸವಾಲು ಎದುರಾಗಿದೆ. ಅದೇನು ಇಲ್ಲಿದೆ ವಿವರ.
ಸಿಎಂ ಬದಲಾವಣೆ ವಿಚಾರವಾಗಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಬಣದ ನಡುವೆ ತೆರೆಮರೆಯಲ್ಲೇ ಫೈಟ್ ಜೋರಾಗಿಯೇ ನಡೆಯುತ್ತಿದೆ. ಈ ನಡುವೆ ಸಿದ್ದರಾಮಯ್ಯ ಬಣ ದಲಿತ ಸಿಎಂ ಅಸ್ತ್ರ ಪ್ರಯೋಗಿಸಿದೆ. ಇದು ಹೈಕಮಾಂಡ್ ಗೆ ನುಂಗಲೂ ಆಗದ ಉಗುಳಲೂ ಆಗದ ಬಿಸಿ ತುಪ್ಪವಾಗಿದೆ.
ಇನ್ನೊಂದು ಸಮಸ್ಯೆಯೆಂದರೆ ಸತೀಶ್ ಜಾರಕಿಹೊಳಿ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಬೇಡಿಕೆಯಿಟ್ಟಿದ್ದಾರೆ. ಸದ್ಯಕ್ಕೆ ಈ ಸ್ಥಾನ ಡಿಕೆ ಶಿವಕುಮಾರ್ ಅವರದ್ದಾಗಿದೆ. ಡಿಕೆಶಿಯನ್ನು ಈ ಸ್ಥಾನದಿಂದ ಕಿತ್ತು ಹಾಕಬೇಕಾದರೆ ಅವರು ಸಿಎಂ ಸ್ಥಾನದ ದಾಳ ಉರುಳಿಸುತ್ತಾರೆ.
ಮೂರನೆಯದಾಗಿ ಹೊಸದಾಗಿ ಆಯ್ಕೆಯಾದ ಶಾಸಕರು ಹೈಕಮಾಂಡ್ ಗೆ ಪತ್ರ ಬರೆದಿದ್ದು ಸಚಿವ ಸ್ಥಾನಕ್ಕೆ ಬೇಡಿಕೆಯಿಟ್ಟಿದ್ದಾರೆ. ಹೊಸಬರು ಬಹುತೇಕರು ಡಿಕೆಶಿ ಬಣಕ್ಕೆ ಸೇರಿದವರು. ಸಚಿವ ಸಂಪುಟ ವಿಸ್ತರಣೆ ಎಂದರೆ ಜೇನುಗೂಡಿಗೆ ಕೈ ಹಾಕಿದಂತೆ. ಹೀಗಾಗಿ ಸದ್ಯಕ್ಕೆ ಹೈಕಮಾಂಡ್ ಗೆ ಮೂರು ಸಮಸ್ಯೆಗಳು ಎದುರಾಗಿದೆ.