ಬೆಂಗಳೂರು: ತಲೆಮರೆಸಿಕೊಂಡಿದ್ದ 6 ನಕ್ಸಲರು ಶಸ್ತ್ರಾಸ್ತ್ರ ತೊರೆದು ಮುಖ್ಯವಾಹಿನಿಗೆ ಬರಲು ಸಿದ್ಧರಾಗಿದ್ದಾರೆ. ನಾಗರಿಕ ಸಮಿತಿ, ಶರಣಾಗತಿ ಸಮಿತಿ ಮಾತುಕತೆ ಬಳಿಕ ಇಂದು ನಕ್ಸಲರು ಶರಣಾಗತಿಯಾಗುತ್ತಿದ್ದಾರೆ.
ಇಂದು ಚಿಕ್ಕಮಗಳೂರಿನ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಮ್ಮುಖದಲ್ಲಿ ಶರಣಾಗಲಿದ್ದಾರೆ. ಈ ಪೈಕಿ ಮುಂಡುಗಾರು ಲತಾ, ವನಜಾಕ್ಷಿ, ಸುಂದರಿ, ಮಾರಪ್ಪ ಅರೋಳಿ, ವಸಂತ್ ಹಾಗೂ ಎನ್ ಜೀಶಾ ಶರಣಾಗತಿಯಾಗಲಿದ್ದಾರೆ.
ಈ ನಕ್ಸಲರು ಸುಮ್ಮನೇ ಶರಣಾಗುತ್ತಿಲ್ಲ. ಸಾಕಷ್ಟು ಬೇಡಿಕೆಗಳನ್ನಿಟ್ಟುಕೊಂಡೇ ಶರಣಾಗುತ್ತಿದ್ದಾರೆ. ಶರಣಾಗತಿಯಾಗುತ್ತಿರುವ ನಕ್ಸಲರಿಗೆ ಸರ್ಕಾರ ಪ್ಯಾಕೇಜ್ ನೀಡುತ್ತಿದೆ. ಇದರಲ್ಲಿ ಮೂರು ಕೆಟಗರಿ ಇದೆ.
ಕೆಟಗರಿ ಎ: ನಮ್ಮ ರಾಜ್ಯದವರೇ ಆಗಿದ್ದು, ಆಕ್ಟಿವ್ ಆಗಿರುವಾಗ ಕೇಸ್ ಇದ್ದು ಶರಣಾಗತಿಯಾಗುತ್ತಿದ್ದರೆ 7.50 ಲಕ್ಷ ರೂ. ಹಣ ಸಿಗುತ್ತದೆ.
ಕೆಟಗರಿ ಬಿ: ನಕ್ಸಲರು ಹೊರರಾಜ್ಯದವನಾಗಿದ್ದು, ಶಸ್ತ್ರಸಜ್ಜಿತ ನಕ್ಸಲ್ ಗುಂಪಿನ ಸದಸ್ಯನಾಗಿದ್ದು, ಒಂದಕ್ಕಿಂತ ಹೆಚ್ಚು ಸದಸ್ಯರಾಗಿದ್ದರೆ 4 ಲಕ್ಷ ರೂ. ಪ್ಯಾಕೇಜ್ ಸಿಗುತ್ತದೆ.
ಕೆಟಗರಿ ಸಿ: ನಕ್ಸಲ್ ಗುಂಪಿನೊಂದಿಗೆ ಸಂಪರ್ಕ ಹೊಂದಿ, ಪ್ರಕರಣಗಳು ಇದ್ದರೆ 2 ಲಕ್ಷ ರೂ. ಹಣವನ್ನು ಸರ್ಕಾರ ನೀಡಲಿದೆ.