Publish Date: Wed, 07 Jun 2017 (11:30 IST)
Updated Date: Wed, 07 Jun 2017 (11:32 IST)
ಬೆಂಗಳೂರು: ವಿಧಾನಸೌಧದಲ್ಲಿ ಮುಂಗಾರು ಅಧಿವೇಶನ ಆರಂಭವಾಗಿ ಎರಡು ದಿನ ಕಳೆದಿದೆ. ಆದರೆ ಯಾಕೋ ಶಾಸಕರು, ಸಚಿವರಿಗೆ ಅಧಿವೇಶನಕ್ಕೆ ಬರಲು ಮನಸ್ಸೇ ಆಗುತ್ತಿಲ್ಲ.
ಇಂದು ಕಲಾಪದಲ್ಲಿ ಹಾಜರಿದ್ದ ಶಾಸಕರು ಕೇವಲ 40 ಮಂದಿ ಮಾತ್ರ. ಇನ್ನು ಸಚಿವರುಗಳ ಪೈಕಿ ಕೇವಲ 6 ಮಂದಿ ಸಚಿವರು ಸದನದಲ್ಲಿದ್ದಾರೆ. ಉಳಿದಂತೆ ಎಲ್ಲರೂ ಗೈರಾಗಿದ್ದಾರೆ. ವಿಶೇಷವೆಂದರೆ ಗೈರಾದವರಲ್ಲಿ ಪಕ್ಷ ಬೇಧವಿಲ್ಲ.
ಬರ ಚರ್ಚೆ ಹಾಗೂ ವಿವಿಧ ಇಲಾಖಾವಾರು ಚರ್ಚೆಗಳು ನಡೆಯುತ್ತಿರುವಾಗ ಜನ ಪ್ರತಿನಿಧಿಗಳೇ ಇಲ್ಲದಿದ್ದರೆ, ಜನರ ಸಮಸ್ಯೆಗಳಿಗೆ ಪರಿಹಾರ ಸಿಗುವುದು ಹೇಗೆ ಎಂಬುದೇ ಎಲ್ಲರ ಪ್ರಶ್ನೆ. ಆದರೆ ಜನರಿಂದ ಚುನಾಯಿತರಾಗಿ ಜನರ ಆಶೋತ್ತರಗಳಿಗೆ ಧ್ವನಿಯಾಗಬೇಕಾದ ಶಾಸಕರು ತಮ್ಮದೇ ಲೋಕದಲ್ಲಿದ್ದಾರೆ ಎನ್ನುವುದೇ ಬೇಸರದ ಸಂಗತಿ.