Publish Date: Wed, 07 Jun 2017 (11:13 IST)
Updated Date: Wed, 07 Jun 2017 (11:17 IST)
ಬೆಂಗಳೂರು: 150 ಕೋಟಿ ರೂ. ಕಿಕ್ ಬ್ಯಾಕ್ ಪಡೆದಿದ್ದಾರೆಂಬ ಆರೋಪದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ದಾಖಲೆ ಸಲ್ಲಿಸಲು ಮಾಜಿ ಸಚಿವ ಜನಾರ್ಧನ ರೆಡ್ಡಿ ಎಸ್ ಐಟಿ ಮುಂದೆ ಹಾಜರಾಗಿದ್ದಾರೆ.
ಕುಮಾರ ಸ್ವಾಮಿ ವಿರುದ್ಧ ಆರೋಪ ಮಾಡಿದ್ದ ಜನಾರ್ಧನ ರೆಡ್ಡಿಯವರಿಂದ ವಿವರಣೆ ಪಡೆಯಲು ಎಸ್ ಐಟಿ ಕೆಲವು ದಿನಗಳ ಹಿಂದೆಯೇ ಬುಲಾವ್ ನೀಡಿತ್ತು. ಆದರೆ ಸಾಕ್ಷ್ಯ ಸಂಗ್ರಹಕ್ಕೆ 3 ವಾರ ಅವಕಾಶ ಕೊಡಬೇಕೆಂದು ಜನಾರ್ಧನ ರೆಡ್ಡಿ ಆಗ್ರಹಿಸಿದ್ದರು.
ಅದೇ ಕಾರಣಕ್ಕೆ ರೆಡ್ಡಿಯವರನ್ನು ವಿಚಾರಣೆಗಾಗಿ ಎಸ್ ಐಟಿ ತನ್ನ ಕಚೇರಿಗೆ ಕರೆಸಿಕೊಂಡಿತ್ತು. ಇದರೊಂದಿಗೆ ಮತ್ತೊಮ್ಮೆ ಕುಮಾರಸ್ವಾಮಿ-ರೆಡ್ಡಿ ನಡುವೆ ಗುದ್ದಾಟಕ್ಕೆ ವೇದಿಕೆ ಸಜ್ಜಾಗಿದೆ.