Select Your Language

Notifications

webdunia
webdunia
webdunia
webdunia

ತಂದೆಯಿಂದಲೇ ಮಗಳ ಮೇಲೆ ಅತ್ಯಾಚಾರ.. ಸತ್ಯ ಕಂಡುಹಿಡಿಯಲು ತಾಯಿ ಮಾಡಿದ್ದೇನು ಗೊತ್ತಾ..?

ತಂದೆಯಿಂದಲೇ ಮಗಳ ಮೇಲೆ ಅತ್ಯಾಚಾರ.. ಸತ್ಯ ಕಂಡುಹಿಡಿಯಲು ತಾಯಿ ಮಾಡಿದ್ದೇನು ಗೊತ್ತಾ..?
ಬೆಂಗಳೂರು , ಬುಧವಾರ, 7 ಜೂನ್ 2017 (11:03 IST)
14 ವರ್ಷದ ಮಗಳ ಮೇಲೆ ತಂದೆಯೇ ನಿರಂತರ ಅತ್ಯಾಚಾರ ನಡೆಸಿರುವ ಘಟನೆ ಬೆಂಗಳೂರಿನ ರಾಜಗೋಪಾಲ ನಗರ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ಮಾಗಡಿ ಮೂಲದ ರಮೇಶ್ ಎಂಬಾತ ಮಗಳ ಮೇಲೆ ಅತ್ಯಾಚಾರ ನಡೆಸಿರುವ ಆರೋಪ ಕೇಳಿಬಂದಿದೆ.

ಪತ್ನಿ ಫ್ಯಾಕ್ಟರಿಗೆ ಕೆಲಸಕ್ಕೆ ತೆರಳಿದ ಬಳಿಕ ತಂದೆ, ಮಗಳ ಮೇಲೆ ಅತ್ಯಾಚಾರ ನಡೆಸುತ್ತಿದ್ದನೆಂದು ಆರೋಪಿಸಲಾಗಿದೆ. ತಾಯಿ ಬಳಿ ಹೇಳಿದರೆ ತಾಯಿಯನ್ನ ಕೊಲ್ಲುವುದಾಗಿ ತಂದೆ ಬೆದರಿಸಿದ್ದರಿಂದ ಮಗಳು ನೋವನ್ನ ನುಂಗಿ ಸುಮ್ಮನಿದ್ದಳು. ಇತ್ತೀಚೆಗೆ, ತಾಯಿಗೆ ಕುಕೃತ್ಯದ ಸೂಚನೆ ಸಿಕ್ಕಿದ್ದು, ಗಂಡನನ್ನ ವಿಚಾರಿಸಿದ್ದಾಳೆ. ಈ ಸಂದರ್ಭ ಪತ್ನಿ ಮೇಲೆಯೇ ದಬ್ಬಾಳಿಕೆಗೆ ಯತ್ನಿಸಿದ್ದಾನೆ.

ಸತ್ಯ ಹೊರತರಲು ತಾಯಿ ಲಗ್ಗೆರೆಯ ಪೂಜಾರಿಯೊಬ್ಬರ ಮೊರೆ ಹೋಗಿದ್ದಾಳೆ. ಪೂಜಾರಿ ಹುಡುಗಿಯನ್ನ ಮುಳ್ಳಿನ ಮೇಲೆ ಮಲಗಿಸಿ ರಕ್ತ ಬಂದರೆ ಅತ್ಯಾಚಾರ ನಡೆದಿಲ್ಲ. ರಕ್ತ ಬರದಿದ್ದರೆ ಅತ್ಯಾಚಾರ ನಡೆದಿಲ್ಲ ಎಂದು ಹೇಳಿ ಬಾಲಕಿಗೆ ಹಿಂಸೆ ನೀಡಿದ್ದಾನೆ. ಇದನ್ನ ಕಂಡ ಸ್ಥಳೀಯರು ಪೂಜಾರಿ ಮತ್ತು ಪೋಷಕರನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಲಿಂಕ್ ಕ್ಲಿಕ್ ಮಾಡಿ..

http://kannada.
fantasycricket.webdunia.com/

Share this Story:

Follow Webdunia kannada

ಮುಂದಿನ ಸುದ್ದಿ

ವಿವಾದಕ್ಕೆ ಕಾರಣವಾಯ್ತು ಕೇರಳ ಶಾಸಕಿಯ ಪುತ್ರಿಯ ವಿವಾಹ