Select Your Language

Notifications

webdunia
webdunia
webdunia
webdunia

ಕರ್ನಾಟಕ ಸರ್ಕಾರ ಹಿಂದುಳಿದ ಸಮಾಜಕ್ಕೆ ಅನ್ಯಾಯ ಮಾಡಿದೆ

Karnataka government
bangalore , ಶನಿವಾರ, 19 ಆಗಸ್ಟ್ 2023 (19:40 IST)
ಹಿಂದುಳಿದ ಸಮಾಜಕ್ಕೆ ಸೇರಿದ ಮುಖ್ಯಮಂತ್ರಿ ಬಂದಮೇಲೆ ಕಾಳಜಿ ತೋರುಸ್ತಾರೆ ಎಂದುಕೊಂಡಿದ್ವಿ ಆದ್ರೆ ಹಿಂದುಳಿದ ಇಲಾಖೆ ಕೂಡ ದುರ್ಬಲವಾಗಿದೆ.ಮುಸ್ಲಿಂ ಸಮುದಾಯಕ್ಕೆ 150 ಕೊಟ್ಟಿದ್ದಾರೆ,ಅವರಿಗೆ ಕೊಡಲಿ ಬೇಡ ಅನ್ನಲ್ಲ.ಆದ್ರೆ ಹಿಂದುಳಿದ ಸಮುದಾಯ ಏನು ಅನ್ಯಾಯ ಮಾಡಿದೆ .ಹಿಂದುಳಿದ ಸಮುದಾಯಗಳ ನಿಗಮಗಳಿಗೆ ಕೂಡ ಹಣ ನೀಡಿಲ್ಲ.ಬಜೆಟ್‌ನಲ್ಲಿ ಹಿಂದುಳಿದ ವರ್ಗವನ್ನ ಕಡೆಗಣಿಸಿದೆ.ಯಾಕೆ ಹಿಂದುಳಿದ ವರ್ಗಕ್ಕೆ ಬಜೆಟ್‌ನಲ್ಲಿ ಹಣ ಕೊಟ್ಟಿಲ್ಲ ಎಂದು ಸಿಎಂ ಉತ್ತರಿಸಬೇಕು ಮತ್ತು ತಪ್ಪನ್ನು ಸರಿಪಡಿಸುವ ಕೆಲಸ ಮಾಡಬೇಕು .ದೇವರಾಜು ಅರಸು ಪ್ರಶಸ್ತಿಯನ್ನು ಹಿಂದಿನ ಸರ್ಕಾರ ನೀಡುತ್ತಿತ್ತು.ಜಿಲ್ಲೆಗೊಂದು ನೀಡುತ್ತಿದ್ದ ಪ್ರಶಸ್ತಿಯನ್ನು ಸರ್ಕಾರ ನಿಲ್ಲಿಸಿದೆ .ಯಾಕೆ ಸರ್ಕಾರ ಈ ಕ್ರಮ ಕೈಗೊಂಡಿದೆ.ಇಂದು ಅನೇಕ ಸಮಾಜಗಳ ನಿಗಮಗಳು ತೋರಿಕೆಗೆ ಮಾತ್ರವಿದೆ ಅನಿಸುತ್ತದೆ.ಬೊಮ್ಮಾಯಿಯವರು ಸಿಎಂ ಆಗಿದ್ದಾಗ ಕಡೆಗಣನೆಯಾಗಿದ್ದ ಸಮುದಾಯಗಳ ನಿಗಮ ಸ್ಥಾಪನೆ ಮಾಡಿದ್ರು.ಈಗ ಸಿಎಂ ಅದನ್ನು ಕಡೆಗಣಿಸದೆ ಗಮನ ಹರಿಸಬೇಕು ಎಂದು ಆಗ್ರಹಿಸುತ್ತೇವೆ.ಹಿಂದುಳಿದ ಸಮುದಾಯದ ಕಡೆಗಣನೆ ಮತ್ತು ಹಣ ಬಿಡುಗಡೆ ಮಾಡದಿದ್ದರೆ .ಜಿಲ್ಲಾ ಮತ್ತು ಮಂಡಳ ಮಟ್ಟದಲ್ಲಿ ಹಿಂದುಳಿದ ಸಮಾಜ ಹೋರಾಟಕ್ಕೆ ಮುಂದಾಗಲಿದೆ ಎಂಬ ಎಚ್ಚರಿಕೆಯನ್ನು ಕೂಡ ಕೊಡುತ್ತೇವೆ ಎಂದು ನೆ ಲ ನರೇಂದ್ರ ಬಾಬು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಫ್ಲೈ ಒವರ್ ಕಾಮಗಾರಿಗೆ ಒಟ್ಟು 300 ಕೋಟಿಗಳಷ್ಟು ಹಣ ಬೇಕಾಗುತ್ತೆ- ಡಿಕೆಶಿ