Publish Date: Sat, 11 Dec 2021 (17:31 IST)
Updated Date: Sat, 11 Dec 2021 (19:33 IST)
ರಾಜ್ಯದಲ್ಲಿ 8 ಕೋಟಿ ಡೋಜ್ ಕೊರೊನಾ ಲಸಿಕೆ ನೀಡುವ ಮೂಲಕ ಕರ್ನಾಟಕ ಮತ್ತೊಂದು ಮೈಲುಗಲ್ಲು ಸ್ಥಾಪಿಸಿದೆ.
ಕೊರೊನಾ ವೈರಸ್, ಡೆಲ್ಟಾ ಮತ್ತು ಇದೀಗ ಒಮಿಕ್ರಾನ್ ವೈರಸ್ ಅಬ್ಬರ ತಡೆಯಲು ದೇಶಾದ್ಯಂತ ಕೊರೊನಾ ಲಸಿಕೆ ಅಭಿಯಾನ ಮುಂದುವರಿಯುತ್ತಿದ್ದು, 8 ಕೋಟಿ ಡೋಜ್ ಲಸಿಕೆ ನೀಡುವ ಮೂಲಕ ರಾಜ್ಯ ದೇಶದಲ್ಲಿ ನಂ.1 ಸ್ಥಾನ ಪಡೆದಿದೆ.ಆರೋಗ್ಯ ಸಚಿವ ಕೆ.ಸುಧಕಾರ್ ಶನಿವಾರ ಟ್ವಿಟರ್ ನಲ್ಲಿ ಈ ವಿಷಯವನ್ನು ಹಂಚಿಕೊಂಡಿದ್ದು, ಕೊರೊನಾ ಲಸಿಕೆ ನೀಡುವಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ .ಅದೇ ರೀತಿ 2ನೇ ಡೋಜ್ ಲಸಿಕೆ ನೀಡುವಿಕೆಯಲ್ಲಿ 3ನೇ ಸ್ಥಾನ ಪಡೆದಿದೆ ಎಂದು ತಿಳಿಸಿದ್ದಾರೆ.
ಲಸಿಕೆ ನೀಡುವಲ್ಲಿ ಮಹತ್ವದ ಪಾತ್ರ ವಹಿಸಿದ ಜಿಲ್ಲಾಡಳಿತ, ಆರೋಗ್ಯ ಇಲಾಖೆ ಸೇರಿದಂತೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಸುಧಾಕರ್ ಶುಭ ಕೋರಿದ್ದಾರೆ.