Select Your Language

Notifications

webdunia
webdunia
webdunia
webdunia

ಮದ್ಯದ ಬೆಲೆಯನ್ನೂ ಏರಿಸಿದ ರಾಜ್ಯ ಸರ್ಕಾರ: ಬೆಲೆ ಏರಿಕೆಗಳ ಪಟ್ಟಿಗೆ ಮತ್ತೊಂದು ಸೇರ್ಪಡೆ

Liqour

Krishnaveni K

ಬೆಂಗಳೂರು , ಶುಕ್ರವಾರ, 10 ಜನವರಿ 2025 (14:20 IST)
ಬೆಂಗಳೂರು: ಬಸ್ ಟಿಕೆಟ್ ದರ ಹೆಚ್ಚಳ ಬೆನ್ನಲ್ಲೇ ರಾಜ್ಯ ಸರ್ಕಾರ ಈಗ ಬಿಯರ್ ಬೆಲೆಯನ್ನೂ ಹೆಚ್ಚಿಸಿದೆ. ಇದರೊಂದಿಗೆ ರಾಜ್ಯ ಸರ್ಕಾರದ ಬೆಲೆ ಏರಿಕೆಗಳ ಪಟ್ಟಿಗೆ ಮತ್ತೊಂದು ಸೇರ್ಪಡೆಯಾದಂತಾಗಿದೆ.

ಇತ್ತೀಚೆಗೆ ರಾಜ್ಯ ಸರ್ಕಾರ ಬಸ್ ಟಿಕೆಟ್ ದರ, ಬಸ್ ಪಾಸ್ ದರ ಹೆಚ್ಚಳ ಮಾಡಿತ್ತು. ನಂದಿನಿ ಹಾಲು, ಬೆಂಗಳೂರಿಗರಿಗೆ ನೀರಿನ ಬೆಲೆ ಏರಿಕೆಯೂ ಸದ್ಯದಲ್ಲೇ ಕಾದಿದೆ. ಇದರ ನಡುವೆ ಈಗ ಮದ್ಯ ಬೆಲೆಯೂ ಹೆಚ್ಚಳವಾದಂತಾಗಿದ್ದು ಜನರಿಗೆ ಮತ್ತೊಂದು ಬೆಲೆ ಏರಿಕೆಯ ಬರೆ ಎಳೆದಂತಾಗಿದೆ.

ಪ್ರಸಕ್ತ ಆರ್ಥಿಕ ವರ್ಷದ ಮೊದಲ 9 ತಿಂಗಳಲ್ಲಿ ಅಬಕಾರಿ ಇಲಾಖೆಯಿಂದ ನಿರೀಕ್ಷಿತ ಆದಾಯ ಬಂದಿಲ್ಲ. ಈ ಕಾರಣಕ್ಕೆ ಮದ್ಯದ ಬೆಲೆ ಏರಿಕೆ ಮಾಡಲಾಗಿದೆ. ಆದಾಯ ಕೊರತೆಯ ಹೊರೆ ಗ್ರಾಹಕರ ಜೇಬಿಗೆ ಬಿದ್ದಿದೆ.

ಯಾವುದಕ್ಕೆ ಎಷ್ಟು ದರ?
ಪ್ರೀಮಿಯಂ ಮದ್ಯದ ಬಾಟಲ್ ಗೆ 10 ರೂ.ನಿಂದ 50 ರೂ. ಹೆಚ್ಚಳವಾಗಿದೆ. ಪ್ರತೀ ಬಿಯರ್ ನಲ್ಲಿ ಆಲ್ಕೋಹಾಲ್ ಅಂಶಕ್ಕೆ ಅನುಗುಣವಾಗಿ ಬೆಲೆ ಏರಿಕೆಯಾಗಿದೆ. ಆದರೆ ಭಾರತೀಯ ನಿರ್ಮಿತ ಮದ್ಯದ ಬೆಲೆ ಕಡಿಮೆಯಾಗುವ ಸಾಧ್ಯತೆಯಿದೆ. ಭಾರತೀಯ ಮದ್ಯದ ಉತ್ಪನ್ನವನ್ನು ಉತ್ತೇಜಿಸುವ ಸಲುವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಜನವರಿ 20 ರಿಂದ ಹೊಸ ದರ ಜಾರಿಗೆ ಬರಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಗ್ಯಾರಂಟಿ ಹೊರೆ ಅಲ್ಲಾಂದ್ರೆ ಬೆಲೆ ಏರಿಕೆ ಯಾಕೆ ಮಾಡ್ತೀರಿ: ಸಿದ್ದರಾಮಯ್ಯಗೆ ಪ್ರಶ್ನೆ