Select Your Language

Notifications

webdunia
webdunia
webdunia
webdunia

ಮಳೆ ಪೀಡಿತ ಬೆಂಗಳೂರಿನಲ್ಲಿ ಸಿಎಂ ಬೊಮ್ಮಾಯಿ ರೌಂಡ್ಸ್

basavaraja bommai bengaluru karnataka ಕರ್ನಾಟಕ ಬಸವರಾಜ ಬೊಮ್ಮಾಯಿ ಬೆಂಗಳೂರು
bengaluru , ಗುರುವಾರ, 19 ಮೇ 2022 (14:33 IST)

ರಾಜಧಾನಿ ಬೆಂಗಳೂರು ಮಹಾಮಳೆಗೆ ತತ್ತರಿಸಿದ್ದು, ಹಲವು ಪ್ರದೇಶಗಳು ಜಲಾವೃತಗೊಂಡಿವೆ. ಮನೆಗಳಿಗೆ ನೀರು ನುಗ್ಗಿ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಸಿಎಂ ಬಸವರಾಜ್ ಬೊಮ್ಮಾಯಿ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿದ್ರು. ಸಿಎಂ ಬಸವರಾಜ್ ಬೊಮ್ಮಾಯಿ ಬಿಎಂಟಿಸಿ ಬಸ್ ನಲ್ಲಿ ಎರಡನೇ ದಿನ ಸಿಟಿ ರೌಂಡ್ಸ್ ಆರಂಭಿಸಿದ್ರು.

ಜೆ.ಸಿ.ನಗರ, ಕಮಲಾನಗರ, ನಾಗವಾರ, ಹೆಚ್‌ಎಸ್‌ಆರ್ ಲೇಔಟ್ ಸೇರಿದಂತೆ ಮಳೆಯಿಂದ ಸಂಕಷ್ಟಕ್ಕೀಡಾದ ಪ್ರದೇಶಗಳಿಗೆ ಭೇಟಿ ನೀಡಿ, ಜನರ ಸಮಸ್ಯೆ ಆಲಿಸಿದ್ರು. ಸಿಎಂ ಬೊಮ್ಮಾಯಿ‌ಯವರಿಗೆ ಸಚಿವರಾದ ಆರ್ ಅಶೋಕ್, ಕೆ ಗೋಪಾಲಯ್ಯ, ವಿ.ಸೋಮಣ್ಣ, ಸಂಸದ ಪಿ.ಸಿ. ಮೋಹನ್​​​ , ಬಿಬಿಎಂಪಿ ಕಮಿಷನರ್​ ತುಷಾರ್​​ ಗಿರಿನಾಥ್​​​, ಪೊಲೀಸ್ ಕಮಿಷನರ್​​​ ಸಿ.ಹೆಚ್​.ಪ್ರತಾಪ್​​ ರೆಡ್ಡಿ ಬಿಬಿಎಂಪಿ, ಜಲಮಂಡಳಿ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಸಾಥ್​​ ನೀಡಿದರು.

ಈ ವೇಳೆ ಜನ ಆಕ್ರೋಶ ವ್ಯಕ್ತಪಡಿಸುವುದರ ಜೊತೆಗೆ ಮುಖ್ಯಮಂತ್ರಿಯನ್ನ ತರಾಟೆಗೆ ತೆಗೆದುಕೊಂಡ ಪ್ರಸಂಗವೂ ನಡೆಯಿತು.


Share this Story:

Follow Webdunia kannada

ಮುಂದಿನ ಸುದ್ದಿ

ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟ: 10 ವರ್ಷದಲ್ಲೇ ಗರಿಷ್ಠ ಫಲಿತಾಂಶ