ಬೆಂಗಳೂರು: ಇಂದಿನಿಂದ ಕರ್ನಾಟಕದಲ್ಲಿ ಜಾತಿಗಣತಿ ಆರಂಭವಾಗಲಿದ್ದು, ಹೊರರಾಜ್ಯದಿಂದ ಬಂದವರು, ಎರಡು ಪಡಿತರ ಚೀಟಿ ಹೊಂದಿರುವವರು ತಪ್ಪದೇ ಈ ಮಾಹಿತಿಯನ್ನು ಗಮನಿಸಿ.
ಇಂದಿನಿಂದ ಅಕ್ಟೋಬರ್ 7 ರವರೆಗೆ ಮನೆ ಮನೆಗೆ ಅಧಿಕಾರಿಗಳು ಬಂದು ಸಮೀಕ್ಷೆ ನಡೆಸಲಿದ್ದಾರೆ. ಈ ವೇಳೆ ನಿಮ್ಮ ಆಧಾರ್ ಕಾರ್ಡ್, ಮೊಬೈಲ್, ಪಡಿತರ ಚೀಟಿ ಜೊತೆಗಿರುವುದು ಕಡ್ಡಾಯವಾಗಿದೆ. ಸಮೀಕ್ಷೆಯಲ್ಲಿ ಕೇಳಲಾಗುವ ಮಾಹಿತಿಯನ್ನು ತಪ್ಪದೇ ನೀಡಬೇಕಾಗುತ್ತದೆ.
ಒಂದು ವೇಳೆ ನೀವು ಹೊರ ರಾಜ್ಯದಿಂದ ಬಂದು ಇಲ್ಲಿ ನೆಲೆಸಿದ್ದರೂ ನಿಮ್ಮ ಮಾಹಿತಿಗಳನ್ನು ನೀಡಬೇಕಾಗುತ್ತದೆ. ವಿದೇಶದಲ್ಲಿರುವ ಕನ್ನಡಿಗರೂ ಆನ್ ಲೈನ್ ಮೂಲಕ ಮಾಹಿತಿಯನ್ನು ಒದಗಿಸಬೇಕಾಗುತ್ತದೆ.
ಇನ್ನು, ಒಂದೇ ಕುಟುಂಬದವರು ಎರಡು ಪಡಿತರ ಚೀಟಿ ಹೊಂದಿದ್ದರೂ ಅವರು ಎರಡು ಕುಟುಂಬ ಎಂದು ಪರಿಗಣಿಸಲಾಗುತ್ತದೆ. ಒಂದು ವೇಳೆ ಗಂಡ ಮತ್ತು ಹೆಂಡತಿಯ ಜಾತಿ ಬೇರೆಯಾಗಿದ್ದರೆ ಮಕ್ಕಳಿಗೆ ತಂದೆಯ ಜಾತಿಯನ್ನೇ ಪರಿಗಣಿಸಲಾಗುತ್ತದೆ. ಗಣತಿ ಪ್ರಕ್ರಿಯೆ ಮುಗಿದ ಬಳಿಕ ಮಾಹಿತಿ ಬದಲಾಯಿಸಲು ಅವಕಾಶವಿರಲ್ಲ.