Select Your Language

Notifications

webdunia
webdunia
webdunia
webdunia

ಕರ್ನಾಟಕ ಬಜೆಟ್ 2024 ಹೈಲೈಟ್ಸ್

Siddaramaiah

Krishnaveni K

ಬೆಂಗಳೂರು , ಶುಕ್ರವಾರ, 16 ಫೆಬ್ರವರಿ 2024 (13:10 IST)
ಬೆಂಗಳೂರು: ಸಿಎಂ ಸಿದ್ದರಾಮಯ್ಯ ಇಂದು 2024-25 ನೇ ಸಾಲಿನ ಬಜೆಟ್ ಮಂಡಿಸಿದ್ದು, ಯಾವೆಲ್ಲಾ ಯೋಜನೆಗಳಿಗೆ ಹಣ ನೀಡಿದ್ದಾರೆ ಎಂಬ ವಿವರಗಳು ಇಲ್ಲಿವೆ ನೋಡಿ. ಈ ಬಾರಿ ಸಿಎಂ ಸಿದ್ದರಾಮಯ್ಯ 3.71 ಲಕ್ಷ ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಿದರು. ಇದರಲ್ಲಿ ವಾಣಿಜ್ಯ ತೆರಿಗೆ ರೂಪದಲ್ಲಿ 11 ಸಾವಿರ ಕೋಟಿ ರೂ.,ಅಬಕಾರಿ ಇಲಾಖೆಯಿಂದ 38,525 ಕೋಟಿ, ನೋಂದಣಿ ಮುದ್ರಾಂಕ ಇಲಾಖೆಯಿಂದ 26000 ಕೋಟಿ, ಮೋಟಾರು ವಾಹನ ತೆರಿಗೆಯಿಂದ 13,000 ಕೋಟಿ, ಇತರೆ ಮೂಲ ತೆರಿಗೆ ರೂಪದಲ್ಲಿ 2,368 ಕೋಟಿ ರೂ. ಆದಾಯ ಬಂದಿದೆ.

  • ಗ್ಯಾರಂಟಿ ಯೋಜನೆಗಳಿಗೆ 52,000 ಕೋಟಿ ರೂ. ಮೀಸಲು
  • ಮದ್ಯ ದರ ಮತ್ತೆ ಹೆಚ್ಚಳ
  • ಸಿರಿ ಧಾನ್ಯಗಳ ಅಭಿವೃದ್ಧಿಗೆ ನಮ್ಮ ಮಿಲೆಟ್ ಯೋಜನೆ
  • ಪ್ರವಾಸೋದ್ಯಮ ಅಭಿವೃದ್ಧಿಗೆ 10 ಸ್ಥಳಗಳಲ್ಲಿ ಕೇಬಲ್ ಕಾರು ರೋಪ್ ವೇ
  • ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ನಿರ್ಮಾಣ, 27 ಸಾವಿರ ಕೋಟಿ ವೆಚ್ಚದಲ್ಲಿ  73 ಕಿ.ಮೀ. ರಸ್ತೆ
  • ಮಾಜಿ ಸಿಎಂ ಬಂಗಾರಪ್ಪ ಸ್ಮಾರಕ ನಿರ್ಮಾಣ
  • ಬೆಂಗಳೂರಿನಲ್ಲಿ 250 ಮೀ. ಎತ್ತರದ ಸ್ಕೈಡೆಕ್ ನಿರ್ಮಾಣ
  • ಮೇಕೆದಾಟು ಅನುಷ್ಠಾನಕ್ಕೆ ಪ್ರತ್ಯೇಕ ಯೋಜನಾ ವಿಭಾಗ
  • ಕುರಿಗಾಹಿ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್
  •  ಪಶು ವೈದ್ಯ ಸಂಸ್ಥೆಗಳಿಗೆ 100 ಕೋಟಿ ಅನುದಾನ
  • ಸಾಂಬಾರು ಪದಾರ್ಥ ಬೆಳೆಯುವ ರೈತರಿಗೆ ಪ್ರೋತ್ಸಾಹ ಧನ
  • ಬೈವೋಲ್ಡಿನ್ ರೇಷ್ಮೆಗೂಡಿಗೆ ಪ್ರೋತ್ಸಾಹ ಧನ ಪ್ರತಿ ಕೆ.ಜಿ.ಗೆ 10 ರೂ. 30 ರೂ. ಗೆ ಹೆಚ್ಚಳ
  • ಬಿಜಾಪುರ ಜಿಲ್ಲೆ ಅಲಮೇದಲ್ಲಿ ತೋಟಗಾರಿಕಾ ಕಾಲೇಜು ಸ್ಥಾಪನೆ
  • ಬೆಂಗಳೂರಿನಲ್ಲಿ ನಮ್ಮ ಮೆಟ್ರೋಗೆ 44 ಕಿ.ಮೀ.ಸೇರ್ಪಡೆ
  • ನರೇಗಾ ಯೋಜನೆಯಡಿ 5 ಸಾವಿರ ಸಣ್ಣ ಸರೋವರ ನಿರ್ಮಾಣ
  • ಕೆಲ ಜಿಲ್ಲೆಗಳಲ್ಲಿ ಕಿಸಾನ್ ಮಾಲ್, ರಾಜ್ಯದ ಮೂರು ಜಿಲ್ಲೆಗಳಲ್ಲಿ ಆಹಾರ ಪಾರ್ಕ್
  • ಮುರುಡೇಶ್ವರದಲ್ಲಿ ಮೀನುಗಾರಿಕಾ ಪಾರ್ಕ್ ನಿರ್ಮಾಣ
  • ಸಮುದ್ರ ಮೀನುಗಾರಿಕೆಗೆ ಆಂಬ್ಯುಲೆನ್ಸ್
  • ರೈತ ಮಹಿಳೆಯರಲ್ಲಿ ಹೈನುಗಾರಿಕೆ ಪ್ರೋತ್ಸಾಹಿಸಲು ಸಾಲ ಮರುಪಾವತಿಸಿದರೆ ಸರ್ಕಾರದಿಂದ ಸಬ್ಸಿಡಿ
  • ಬೆಂಗಳೂರು ಉಪರೈಲು ಯೋಜನೆಗೆ ಒತ್ತು
  • ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್
  • ಗೃಹಲಕ್ಷ್ಮೀ ಯೋಜನೆಗೆ 28 ಸಾವಿರದ 608 ಕೋಟಿ ಮೀಸಲು
  • ವೈದ್ಯಕೀಯ ಕಾಲೇಜುಗಳ ನಿರ್ಮಾಣ ಮತ್ತು ಉಪಕರಣ ಖರೀದಿಗೆ 400 ಕೋಟಿ
  • ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ 350 ಕೋಟಿ

Share this Story:

Follow Webdunia kannada

ಮುಂದಿನ ಸುದ್ದಿ

ಕರ್ನಾಟಕ ಬಜೆಟ್ 2024 ಹೈಲೈಟ್ಸ್