Publish Date: Sat, 25 Apr 2026 (10:58 IST)
Updated Date: Sat, 25 Apr 2026 (11:00 IST)
ಬೆಂಗಳೂರು: ಕ್ಯಾಬಿನೆಟ್ ಸಭೆಗೆ ಚಕ್ಕರ್ ಹಾಕಿ ಹೈಕಮಾಂಡ್ ಮನೆ ಗೇಟ್ ಕಾದರೂ ಪ್ರಯೋಜನವಾಗಿಲ್ಲ ಎಂದು ಕರ್ನಾಟಕ ಬಿಜೆಪಿ ಘಟಕ ಟ್ವೀಟ್ ಮೂಲಕ ಡಿಸಿಎಂ ಡಿಕೆ ಶಿವಕುಮಾರ್ ಗೆ ಟಾಂಗ್ ಕೊಟ್ಟಿದೆ.
ಡಿಕೆ ಶಿವಕುಮಾರ್ ನಿನ್ನೆ ದೆಹಲಿ ಪ್ರವಾಸ ಮಾಡಿದ್ದರು. ಕೇಂದ್ರ ಸಚಿವ ರಾಜನಾಥ್ ಸಿಂಗ್ ಭೇಟಿ ಬಳಿಕ ಹೈಕಮಾಂಡ್ ನಾಯಕ ಮಲ್ಲಿಕಾರ್ಜುನ ಖರ್ಗೆ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದರು. ಇದರ ಬಗ್ಗೆ ಬಿಜೆಪಿ ವ್ಯಂಗ್ಯ ಮಾಡಿದೆ.
ಡಿಕೆ ಶಿವಕುಮಾರ್ ಸಿಎಂ ಪದವಿಗಾಗಿ ಹೈಕಮಾಂಡ್ ನಾಯಕರನ್ನು ಪದೇ ಪದೇ ಭೇಟಿ ನೀಡಿದರೂ ಪ್ರಯೋಜನವಾಗುತ್ತಿಲ್ಲ ಎಂದು ತಿವಿದಿದೆ. ರಾಜ್ಯದಲ್ಲಿ ಕ್ಯಾಬಿನೆಟ್ ಸಭೆಯಿತ್ತು. ಆದರೆ ಇದನ್ನು ಬಿಟ್ಟು ದೆಹಲಿಗೆ ತರಾತುರಿಯಲ್ಲಿ ಹೋಗಿರುವುದನ್ನು ವ್ಯಂಗ್ಯ ಮಾಡಿದೆ.
ಅತ್ಯಂತ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಬೇಕಿದ್ದ ಕ್ಯಾಬಿನೆಟ್ ಸಭೆಗೆ ಚಕ್ಕರ್ ಹಾಕಿ, ದೆಹಲಿಯ ಹೈಕಮಾಂಡ್ ನಾಯಕರ ಮನೆಯ ಗೇಟ್ ಕಾಯುವುದೆಂದರೆ, ಡಿಸಿಎಂ
ಡಿಕೆ ಶಿವಕುಮಾರ್ ಅವರಿಗೆ ಬಲು ಇಷ್ಟ ಅಲ್ವಾ ಎಂದು ಟಾಂಗ್ ಕೊಟ್ಟಿದೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ