ರಸ್ತೆ ಗುಡಿಸುವ ಯಂತ್ರ ಖರೀದಿಸಿ 613 ಕೋಟಿ ರೂ ಗುಳುಂ: ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಆರೋಪ

Krishnaveni K
ಮಂಗಳವಾರ, 18 ನವೆಂಬರ್ 2025 (13:37 IST)
ಬೆಂಗಳೂರು: ರಸ್ತೆ ಗುಡಿಸುವ ಯಂತ್ರಗಳನ್ನು 7 ವರ್ಷಗಳಿಗೆ ಗುತ್ತಿಗೆ ಪಡೆಯು ರಾಜ್ಯ ಸರ್ಕಾರ 613 ಕೋಟಿ ರೂ. ಪೋಲು ಮಾಡುತ್ತಿದೆ ಎಂದು ರಾಜ್ಯ ಬಿಜೆಪಿ ಗಂಭೀರ ಆರೋಪ ಮಾಡಿದೆ.

ಈ ಬಗ್ಗೆ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿರುವ ರಾಜ್ಯ ಬಿಜೆಪಿ ಘಟಕ ‘ಅಧಿಕಾರಕ್ಕೆ ಬಂದಾಗಿನಿಂದ ಹಗರಣಗಳ ಹಳವಂಡಗಳಲ್ಲೇ ಬಿದ್ದು ಒದ್ದಾಡುತ್ತಿರುವ ಕಾಂಗ್ರೆಸ್ ಸರ್ಕಾರದ ಮತ್ತೊಂದು ಭಾರೀ ಹಗರಣ ಬಯಲಾಗಿದೆ.

ಲೂಟಿ ಹೊಡೆಯುವುದಕ್ಕೆ ಅಂತಾನೇ ಕಾದು ಕುಳಿತಿರುವ ಸಿದ್ದರಾಮಯ್ಯನವರ ಸರ್ಕಾರ 46 ರಸ್ತೆ ಗುಡಿಸುವ ಯಂತ್ರಗಳನ್ನು 7 ವರ್ಷಗಳಿಗೆ ₹613 ಕೋಟಿ ವ್ಯಯಿಸಿ ಗುತ್ತಿಗೆ ಪಡೆಯಲು ಮುಂದಾಗಿರುವುದು ನಿಜಕ್ಕೂ ಬೆಚ್ಚಿ ಬೀಳಿಸುವಂತದ್ದು.!

ಮಾರುಕಟ್ಟೆ ದರದಂತೆ ಒಟ್ಟು 46 ಯಂತ್ರಗಳ ಖರೀದಿ ವೆಚ್ಚ ಸುಮಾರು 100 ಕೋಟಿ ಆಗಲಿದೆ. ಆದರೆ, ಲೂಟಿಕೋರ ಸರ್ಕಾರ ₹613 ಕೋಟಿ ವೆಚ್ಚದಲ್ಲಿ ಒಪ್ಪಂದ ಮಾಡಿಕೊಂಡು ನೂರಾರು ಕೋಟಿ  ನುಂಗುವುದಕ್ಕೆ ಹೊಂಚು ಹಾಕಿ ಕುಳಿತಿದೆ. ಹಾಗಾದ್ರೆ, ಉಳಿದ ₹500 ಕೋಟಿಗೂ ಅಧಿಕ ಹಣ  ಎಲ್ಲಿ ಹೋಗುತ್ತಿದೆ? ಯಾರ ಜೇಬು ಸೇರುತ್ತೆ?’ ಎಂದು ಪ್ರಶ್ನೆ ಮಾಡಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

Arecanut Price: ಅಡಿಕೆ ಬೆಳೆಗಾರರಿಗೆ ಗುಡ್ ನ್ಯೂಸ್, ಇಂದು ಬಂಪರ್ ಬೆಲೆ

ಹೈ ಫೈ ಇಂಗ್ಲಿಷ್, ದೊಡ್ಡ ದೊಡ್ಡ ಮಾತು: ದೆಹಲಿ ಬ್ಲಾಸ್ಟ್ ಉಗ್ರ ಉಮರ್ ವಿಡಿಯೋ ವೈರಲ್

Video: ಲಾರಿಯಡಿ ಸಿಲುಕಿ ಸ್ಥಳದಲ್ಲೇ ನರಳಾಡಿ ಪ್ರಾಣ ಬಿಟ್ಟ ದ್ವಿಚಕ್ರ ವಾಹನ ಸವಾರನನ್ನು ಕೇಳೋರೇ ಇಲ್ಲ

ಕಾರ್ಕಳ: ಮುಖ್ಯ ಶಿಕ್ಷಕರು ಹೇಳಿದ್ರೂ ಕೇಳದೇ ಜನಿವಾರ, ದಾರ ತೆಗೆಸುತ್ತಿದ್ದ ಶಿಕ್ಷಕ ಅಮಾನತು

ಮುಂದಿನ ಸುದ್ದಿ
Show comments