ಮುಂಬೈನಲ್ಲಿ ನೆಲೆಸಿರುವ ಕನ್ನಡಿಗರನ್ನು ಹೊರ ಹಾಕಿ. ಆಗ ಕರ್ನಾಟಕ ಸರಕಾರಕ್ಕೆ ಬುದ್ಧಿ ಬರುತ್ತದೆ ಎಂದು ಎಂಇಎಸ್
ನಾಯಕರಾದ ಸಂಭಾಜಿ ಪಾಟೀಲ್ ಹಾಗೂ ಅರವಿಂದ್ ಪಾಟೀಲ್ ಮತ್ತೆ ಉದ್ಧಟತನದ ಹೇಳಿಕೆ ನೀಡಿದ್ದಾರೆ.
ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನ ವಿರೋಧಿಸಿ ಇಂದು ಬೆಳಗಾವಿಯಲ್ಲಿ ಎಂಇಎಸ್ ನಾಯಕರು ಮಹಾಮೇಳಾವ್ ನಡೆಸುತ್ತಿದ್ದಾರೆ.
ಈ ವೇಳೆ ಮಾತನಾಡಿದ ಸಂಭಾಜಿ ಪಾಟೀಲ್ ಹಾಗೂ ಅರವಿಂದ್ ಪಾಟೀಲ್, ಕರ್ನಾಟಕ ಸರಕಾರಕ್ಕೆ ಬಿಸಿ ಮುಟ್ಟಿಸಬೇಕಾದರೆ ಮಹಾರಾಷ್ಟ್ರದಲ್ಲಿ ನಲೆಸಿರುವ ಕನ್ನಡಿಗರನ್ನು ಹೊರಹಾಕಿ. ಆಗ ಮಾತ್ರ ಕರ್ನಾಟಕ ಸರಕಾರಕ್ಕೆ ಬುದ್ಧಿ ಬರುತ್ತದೆ ಎಂದು ಉದ್ಧಟತನ ಮೆರೆದಿದ್ದಾರೆ.
ಶಿವಸೇನಾ ಸಂಸ್ಥಾಪಕ ಬಾಳಾ ಸಾಹೇಬ್ ಠಾಕ್ರೆಯವರು ಬದುಕಿದ್ದರೆ ಇಂದು ನಮಗೆ ನ್ಯಾಯ ಸಿಗುತ್ತಿತ್ತು. ಗಡಿ ವಿವಾದದಲ್ಲಿ ನ್ಯಾಯ ಸಿಗುವವರೆಗೂ ಮಹಾಮೇಳಾವ್ ನಿಲ್ಲಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ