Select Your Language

Notifications

webdunia
webdunia
webdunia
webdunia

ಚಿಟ್ ಫಂಡ್ ಹಗರಣ: ಪ್ರಧಾನಿ ಮೋದಿ ವಿರುದ್ಧ ಮಮತಾ ಬ್ಯಾನರ್ಜಿ ವಾಗ್ದಾಳಿ

ಚಿಟ್ ಫಂಡ್ ಹಗರಣ: ಪ್ರಧಾನಿ ಮೋದಿ ವಿರುದ್ಧ ಮಮತಾ ಬ್ಯಾನರ್ಜಿ ವಾಗ್ದಾಳಿ
ಕೋಲ್ಕತಾ , ಸೋಮವಾರ, 21 ನವೆಂಬರ್ 2016 (15:03 IST)
ನೋಟು ನಿಷೇಧ ಕುರಿತಂತೆ ವಾಗ್ದಾಳಿ ನಡೆಸಿರುವುದನ್ನು ಸಹಿಸದ ಪ್ರಧಾನಮಂತ್ರಿ ನರೇಂದ್ರ ಮೋದಿ, ಇದೀಗ ಚಿಟ್ ಫಂಡ್ ಹಗರಣದಲ್ಲಿ ರಾಜಕೀಯ ನಾಯಕರ ಕೈವಾಡವಿದೆ ಎಂದು ಆರೋಪಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿರುಗೇಟು ನೀಡಿದ್ದಾರೆ.
 
ಕೇಂದ್ರ ಸರಕಾರದ ನೀತಿಯನ್ನು ಯಾರೇ ಟೀಕಿಸಿದರೂ ಅವರ ವಿರುದ್ಧ ಮೋದಿ ವಾಗ್ದಾಳಿ ನಡೆಸುತ್ತಾರೆ. ಪ್ರಧಾನಮಂತ್ರಿಯವರೇ ಯಾರೇ ನಿಮ್ಮ ನೀತಿ ಟೀಕಿಸಿದರೂ ಅವರ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನು ಮಾಡುವುದು ಸರಿಯೇ ಎಂದು ಪ್ರಶ್ನಿಸಿದ್ದಾರೆ.
 
ದೇಶದ ಜನತೆಯ ಧ್ವನಿಗೆ ಪ್ರಧಾನಿಯವರೇ ಓಗೊಡಿ, ಅವರ ನೋವನ್ನು ಅರ್ಥ ಮಾಡಿಕೊಳ್ಳಿ. ನೋಟು ನಿಷೇಧ ಮಾಡಿದ್ದರಿಂದ ಜನತೆ ನಿಮ್ಮನ್ನು ಕ್ಷಮಿಸಬಹುದು ಎಂದು ಮಮತಾ ಟ್ವೀಟ್ ಮಾಡಿದ್ದಾರೆ. 
 
ನಿನ್ನೆ ಕೋಲ್ಕತಾದಲ್ಲಿ ಆಯೋಜಿಸಿದ ಸಭೆಯಲ್ಲಿ ಮಾತನಾಡಿದ್ದ ಮೋದಿ, ಬಹುಕೋಟಿ ಚಿಟ್ ಫಂಡ್ ಹಗರಣದಲ್ಲಿ ಭಾಗಿಯಾದವರಿಗೆ ನೋಟು ನಿಷೇಧದಿಂದ ತೊಂದರೆಯಾಗಿದ್ದರಿಂದ ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ಪ್ರಧಾನಿ ಮೋದಿ, ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಪಂಜಾಬ್ ಚುನಾವಣೆಯಲ್ಲಿ ಗೆದ್ರೆ ಯುವಕರಿಗೆ ಉಚಿತ 50 ಲಕ್ಷ ಸ್ಮಾರ್ಟ್‌ಫೋನ್ ವಿತರಣೆ: ಕಾಂಗ್ರೆಸ್