Select Your Language

Notifications

webdunia
webdunia
webdunia
webdunia

ಹುಬ್ಬಳ್ಳಿ ನಗರ ಪಾಲಿಕೆ ಅಧಿಕಾರಿಗಳಿಂದ ನಾಡ ಧ್ವಜಕ್ಕೆ ಅಪಮಾನ?

kannada flag hubali ಹುಬ್ಬಳ್ಳಿ ಕನ್ನಡ ಧ್ವಜ
bengaluru , ಮಂಗಳವಾರ, 31 ಮೇ 2022 (15:39 IST)

ಹುಬ್ಬಳ್ಳಿ: ಇಲ್ಲಿನ ಹುಬ್ಬಳ್ಳಿ-ಧಾರವಾಡ ನಗರ ಪಾಲಿಕೆ ಅಧಿಕಾರಿಗಳು ರಾಜ್ಯ ಬಾವುಟಕ್ಕೆ ಅವಮಾನ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಧಾರವಾಡದ ಪಾಲಿಕೆಯ ಕಚೇರಿಯಲ್ಲಿ ಮೇಲಿನ ನಾಡ ಧ್ವಜ ಹರಿದಿದೆ. ಆದಾಗ್ಯೂ ಬಾವುಟ ಬದಲಿಸದೇ ಅಪಮಾನ ಮಾಡಲಾಗಿದೆ ಎನ್ನುವುದು ಕನ್ನಡಾಭಿಮಾನಿಗಳ ಆರೋಪವಾಗಿದ್ದು, ಇದು ಅಧಿಕಾರಿಗಳ ನಿರ್ಲಕ್ಷ್ಯವನ್ನು ಎತ್ತಿ ತೋರುತ್ತಿದೆ ಎನ್ನುವುದು ಸ್ಥಳೀಯರ ಅಸಮಾಧಾನವಾಗಿದೆ.

ಬಾವುಟ ಬದಲಿಸಲು ಸಮಯವೇ ಇಲ್ಲದವರಿಂದ ನಗರದ ಅಭಿವೃದ್ಧಿ ಹೇಗೆ ಸಾಧ್ಯ? ಎನ್ನುವುದು ಸ್ಥಳೀಯರ ಪ್ರಶ್ನೆಯಾಗಿದೆ.

ಕೂಡಲೇ ತಪ್ಪು ಮಾಡಿದ ಪಾಲಿಕೆಯ ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸಲು ಸಾರ್ವಜನಿಕರ ಒತ್ತಾಯಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

6 ಮಕ್ಕಳನ್ನು ಬಾವಿಗೆಸೆದು ಕೊಂದ ಪಾಪಿ ತಾಯಿ!