Select Your Language

Notifications

webdunia
webdunia
webdunia
Sunday, 13 April 2025
webdunia

ಮಾರ್ಥಸ್‌ ಆಸ್ಪತ್ರೆ ಮೇಲ್ಫಾವಣೆ ಕುಸಿತ: ಇಬ್ಬರು ಕಾರ್ಮಿಕರು ಸಾವಿನ ಶಂಕೆ

marthas hospital roof collepse  ಮರ್ಥಾಸ್‌ ಆಸ್ಪತ್ರೆ ಬೆಂಗಳೂರು
bengaluru , ಮಂಗಳವಾರ, 31 ಮೇ 2022 (15:25 IST)

ನಿರ್ಮಾಣ ಹಂತದಲ್ಲಿದ್ದ ಬೆಂಗಳೂರಿನ ಮಾರ್ಥಸ್ ಆಸ್ಪತ್ರೆಯ ಮೇಲ್ಛಾವಣಿ ಕುಸಿದ ಘಟನೆ ಮಂಗಳವಾರ ಬೆಳಿಗ್ಗೆ ಸಂಭವಿಸಿದ್ದು, ಕಾರ್ಮಿಕರಿಬ್ಬರು ಮೃತಪಟ್ಟಿರುವ ಶಂಕೆ ವ್ಯಕ್ತಪಡಿಸಲಾಗಿದೆ.

ಬೆಂಗಳೂರಿನ ಮಾರ್ಥಸ್ ಆಸ್ಪತ್ರೆ ನವೀಕರಣ ಕಾಮಗಾರಿ ನಡೆಯುತ್ತಿತ್ತು. ಹಿನ್ನೆಲೆಯಲ್ಲಿ ಬೆಳಗ್ಗೆಯೇ ಬಂದ ಕಾರ್ಮಿಕರು ಕೆಲಸದಲ್ಲಿ ನಿರತರಾಗಿದ್ದರು. ಆದರೆ ಕೆಲಸ ಮಾಡುತ್ತಿರುವಾಗ ಮೇಲ್ಛಾವಣಿ ಕುಸಿದು ಬಿದ್ದಿದ್ದು, ಇಬ್ಬರನ್ನು ಈಗಾಗಲೇ ರಕ್ಷಿಸಲಾಗಿದೆ. ಮತ್ತಿಬ್ಬರಿಗಾಗಿ ಶೋಧ ಕಾರ್ಯ ನಡೆದಿದೆ.

ಘಟನೆಯಲ್ಲಿ ರಪೀಸಾಬ್, ಬಸವರಾಜು ಇಬ್ಬರು ಕಾರ್ಮಿಕರು ಮೇಲ್ಚಾವಣಿ ಕೆಳಗೆ ಸಿಲುಕಿದ್ದು, ರಾಯಚೂರು ಮೂಲದ ಇಬ್ಬರು ಕಾರ್ಮಿಕರಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ, ಸ್ಥಳೀಯ ಪೊಲೀಸರು ಆಗಮಿಸಿದ್ದು, ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ.

ಸುಮಾರು 60 ಅಡಿ ಉದ್ದದ ಮೇಲ್ಛಾವಣಿ ಕುಸಿತವಾಗಿರುವುದರಿಂದ ಜೆಸಿಬಿ ಬಳಸಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆಸ್ಪತ್ರೆ ಮೇಲ್ಚಾವಣಿಗೆ ಸುಮಾರು ಅರವತ್ತು ಅಡಿ ದೂರಕ್ಕೆ ಫಿಲ್ಲರ್ಗಳು ನಿರ್ಮಾಣವಾಗುತ್ತಿತ್ತು. ಫಿಲ್ಲರ್ಗಳ ದೂರಕ್ಕೆ ನಿರ್ಮಾಣ ಮಾಡಿರುವ ಪರಿಣಾಮ ಕುಸಿದುಬಿದ್ದಿರುವ ಸಾಧ್ಯತೆಯಿದೆ


Share this Story:

Follow Webdunia kannada

ಮುಂದಿನ ಸುದ್ದಿ

ಮೂರನೇ ಅಭ್ಯರ್ಥಿಯಾಗಿ ಲೆಹರ್ ಸಿಂಗ್‍ಗೆ ಟಿಕೆಟ್