Select Your Language

Notifications

webdunia
webdunia
webdunia
webdunia

ಕಲಬುರಗಿಯಲ್ಲಿ ಶೇ. 64.38 ರಷ್ಟು ಮತದಾನ

ಕಲಬುರಗಿಯಲ್ಲಿ ಶೇ. 64.38 ರಷ್ಟು ಮತದಾನ
ಕಲಬುರಗಿ , ಶುಕ್ರವಾರ, 31 ಆಗಸ್ಟ್ 2018 (19:41 IST)
ಕಲಬುರಗಿ ಜಿಲ್ಲೆಯ ಏಳು ತಾಲೂಕುಗಳ 168 ವಾರ್ಡುಗಳಿಗಾಗಿ ಇಂದು ನಡೆದ ನಗರ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆಯಲ್ಲಿ ಶೇ. 64.38 ರಷ್ಟು ಮತದಾನವಾಗಿದೆ ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ತಿಳಿಸಿದ್ದಾರೆ. 

ಚಿತ್ತಾಪುರ ತಾಲೂಕಿ ಶಹಾಬಾದ ನಗರಸಭೆಯ 27 ವಾರ್ಡುಗಳಿಗಾಗಿ ಇಂದು ನಡೆದ ಮತದಾನದಲ್ಲಿ 11743 ಪುರುಷರು, 12011 ಮಹಿಳೆಯರು ಹೀಗೆ ಒಟ್ಟು 23754 ಮತದಾರರು ಮತ ಚಲಾಯಿಸಿದ್ದು, ಶೇ. 53.22 ರಷ್ಟು ಮತದಾನವಾಗಿದೆ. 
ಸೇಡಂ ತಾಲೂಕಿನ ಸೇಡಂ ಪುರಸಭೆಯ 23 ವಾರ್ಡುಗಳಿಗಾಗಿ ನಡೆದ ಮತದಾನದಲ್ಲಿ 10948 ಪುರುಷರು ಮತ್ತು 10557 ಮಹಿಳೆಯರು ಸೇರಿದಂತೆ ಒಟ್ಟು 21505 ಮತದಾರರು ಮತ ಚಲಾಯಿಸುವ ಮೂಲಕ ಶೇ. 67.51 ರಷ್ಟು ಮತದಾನ ದಾಖಲಿಸಿದ್ದಾರೆ. 

ಚಿತ್ತಾಪುರ ತಾಲೂಕಿನ ಚಿತ್ತಾಪುರ ಪುರಸಭೆಯ 23 ವಾರ್ಡುಗಳಿಗಾಗಿ ನಡೆದ ಮತದಾನದಲ್ಲಿ 8677 ಪುರುಷರು ಮತ್ತು 8959 ಮಹಿಳೆಯರು ಸೇರಿದಂತೆ ಒಟ್ಟು 17436 ಮತದಾರರು ಮತ ಚಲಾಯಿಸಿದ್ದು, ಶೇ. 67.42 ರಷ್ಟು ಮತದಾನವಾಗಿದೆ. 

ಆಳಂದ ತಾಲೂಕಿನ ಆಳಂದ ಪುರಸಭೆಯ 27 ವಾರ್ಡುಗಳಿಗಾಗಿ ನಡೆದ ಮತದಾನದಲ್ಲಿ 10881 ಪುರುಷರು, 10224 ಮಹಿಳೆಯರು ಹೀಗೆ ಒಟ್ಟು 21105 ಮತದಾರರರು ಮತ ಚಲಾಯಿಸಿ ಶೇ. 62.52 ರಷ್ಟು ಮತದಾನವಾಗಿದೆ. 

ಜೇವರ್ಗಿ ತಾಲೂಕಿನ ಜೇವರ್ಗಿ ಪುರಸಭೆಯ 23 ವಾರ್ಡುಗಳಿಗಾಗಿ ನಡೆದ ಮತದಾನದಲ್ಲಿ 8017 ಪುರುಷರು ಹಾಗೂ 7960 ಮಹಿಳೆಯರು ಸೇರಿದಂತೆ ಒಟ್ಟು 15977 ಮತದಾರರು ಮತ ಚಲಾಯಿಸಿದ್ದಾರೆ. ಶೇ. 71.10 ರಷ್ಟು ಮತದಾನವಾಗಿದೆ. 

ಚಿಂಚೋಳಿ ತಾಲೂಕಿನ ಚಿಂಚೋಳಿ ಪುರಸಭೆಯ 23 ವಾರ್ಡುಗಳಿಗಾಗಿ ನಡೆದ ಮತದಾನದಲ್ಲಿ 5071 ಪುರುಷ ಹಾಗೂ 4984 ಮಹಿಳೆಯರು ಹಾಗೂ ಓರ್ವ ಇತರರು ಹೀಗೆ ಒಟ್ಟು 10056 ಮತದಾರರು ಮತ ಚಲಾಯಿಸಿ ಶೇ. 70.44 ರಷ್ಟು ಮತದಾನವಾಗಿದೆ. 

ಅಫಜಲಪುರ ತಾಲೂಕಿನ ಅಫಜಲಪುರ ಪುರಸಭೆಯ 22 ವಾರ್ಡುಗಳಿಗಾಗಿ ನಡೆದ ಮತದಾನದಲ್ಲಿ 7054 ಪುರುಷರು ಹಾಗೂ 6527 ಮಹಿಳೆಯರು ಸೇರಿದಂತೆ ಒಟ್ಟು 13581 ಮತದಾರರು ಮತ ಚಲಾಯಿಸಿ ಶೇ. 72.03 ರಷ್ಟು ಮತದಾನವಾಗಿದೆ. ಜಿಲ್ಲೆಯ ಏಳು ತಾಲೂಕುಗಳಲ್ಲಿ ಒಟ್ಟು 62391 ಪುರುಷರು ಹಾಗೂ 61022 ಮಹಿಳೆಯರು ಹಾಗೂ ಓರ್ವ ಇತರರು ಸೇರಿದಂತೆ ಒಟ್ಟು 123414 ಮತದಾರರು ಮತ ಚಲಾಯಿಸಿ ಶೇ. 64.38 ರಷ್ಟು ಮತದಾನ ದಾಖಲಿಸಿದ್ದಾರೆ. 



Share this Story:

Follow Webdunia kannada

ಮುಂದಿನ ಸುದ್ದಿ

ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಕೊಪ್ಪಳ ಜಿಲ್ಲೆಯಲ್ಲಿ ಶೇ. 70. 06 ರಷ್ಟು ಮತದಾನ