ವರುಣಾ, ಶಿಕಾರಿಪುರದಲ್ಲಿ ‘ಕೈ’-ಕಮಲ ಫಿಕ್ಸಿಂಗ್​?

Webdunia
ಭಾನುವಾರ, 9 ಏಪ್ರಿಲ್ 2023 (16:03 IST)
ವಿಪಕ್ಷ ನಾಯಕ ಸಿದ್ದರಾಮಯ್ಯ ಅಳೆದು ತೂಗಿ ವರುಣಾ ಕ್ಷೇತ್ರವನ್ನು ಫೈನಲ್​ ಮಾಡಿದ್ದಾರೆ. ಆದರೆ ಸಿದ್ದರಾಮಯ್ಯರನ್ನು ಸೋಲಿಸಲು ರಾಜ್ಯ BJP ಉಪಾಧ್ಯಕ್ಷ B.Y. ವಿಜಯೇಂದ್ರರನ್ನು ವರುಣಾದಿಂದ ಕಣಕ್ಕಿಳಿಸಲಾಗುತ್ತದೆ ಎಂಬ ಮಾತುಗಳು ಕೇಳಿ ಬಂದಿದ್ವು.. ಆದ್ರೆ ಇದೀಗ ವರುಣಾ, ಶಿಕಾರಿಪುರದಲ್ಲಿ ಕಾಂಗ್ರೆಸ್​​, BJP ಮ್ಯಾಚ್​​​ ಫಿಕ್ಸಿಂಗ್​​ ಮಾಡಿಕೊಂಡಿದೆಯಾ ಎಂಬ ಪ್ರಶ್ನೆ ಎದ್ದಿದೆ.. ಮಾಜಿ ಸಿಎಂ H.D. ಕುಮಾರಸ್ವಾಮಿ ಮ್ಯಾಚ್​​ ಫಿಕ್ಸಿಂಗ್​ ಬಗ್ಗೆ ಹಾಕಿದ್ದ ಬಾಂಬ್ ನಿಜಾನಾ ಎಂಬ ಅನುಮಾನ ದಟ್ಟವಾಗಿದ್ದು, ರಾಜಕೀಯ ವಲಯದಲ್ಲಿ ಭಾರೀ ಗುಸುಗುಸು-ಪಿಸುಪಿಸು ನಡೆಯುತ್ತಿದೆ.. B.Y. ವಿಜಯೇಂದ್ರ ವರುಣಾದಿಂದ ಸ್ಪರ್ಧೆ ಬೇಡ, ಅವರು ಶಿಕಾರಿಪುರದಿಂದ ಸ್ಪರ್ಧೆ ಮಾಡ್ತಾರೆ ಎಂದು ಮಾಜಿ ಸಿಎಂ B.S. ಯಡಿಯೂರಪ್ಪ ಹೇಳಿದ್ದಾರೆ.. ವರುಣಾದಿಂದ ಸಚಿವ ವಿ. ಸೋಮಣ್ಣರನ್ನು ಕಣಕ್ಕಿಳಿಸಲಾಗುತ್ತದೆ ಎಂದು ಹೇಳಲಾಗಿದ್ದರೂ, ಸಿದ್ದರಾಮಯ್ಯ ಮತ್ತು ಸೋಮಣ್ಣ ಉತ್ತಮ ಗೆಳೆಯರಾಗಿರುವುದರಿಂದ ವರುಣಾದಿಂದ ಕಣಕ್ಕಿಳಿಯಲು ಸೋಮಣ್ಣ ಹಿಂದೇಟು ಹಾಕಿದ್ದಾರೆ ಎನ್ನಲಾಗಿದೆ... B.Y ವಿಜಯೇಂದ್ರ ಮೊದಲ ಬಾರಿ ಸ್ಪರ್ಧೆಗೆ ಇಳಿದಿರುವುದರಿಂದ ಅವರ ಗೆಲುವ ಸುಲಭವಾಗಬೇಕು.... ಅಂತೆಯೇ ಸಿದ್ದರಾಮಯ್ಯರಿಗೆ ಯಾವುದೇ ರಾಹು, ಕೇತು ಕಾಟ ಕೊಡಬಾರದೆಂದು ಕಾಂಗ್ರೆಸ್​​ ಮತ್ತು BJP ಮ್ಯಾಚ್​​ ಫಿಕ್ಸಿಂಗ್​​ ಮಾಡಿಕೊಂಡಿದ್ಯಾ ಎಂಬ ಅನುಮಾನ ಮೂಡಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮೋದಿಯನ್ನು ನಾನು ಸ್ವಲ್ಪ ಹೆಚ್ಚು ಪ್ರೀತಿಸುತ್ತೇನೆ: ಚಿರಾಗ್ ಪಾಸ್ವಾನ್‌

ಪರಪ್ಪನ ಅಗ್ರಹಾರ ಜೈಲಿನಲ್ಲಿ ಖೈದಿಗಳಿಗೆ ರಾಜಾತಿಥ್ಯ ಪ್ರಕರಣ: ಗೃಹ ಸಚಿವರ ಮಹತ್ವದ ತೀರ್ಮಾನ

ಪತ್ನಿಯ ಕಿರುಕುಳ, ಮದುವೆಯಾದ 8 ತಿಂಗಳಿಗೆ ಬ್ಯಾಂಕ್ ಸಿಬ್ಬಂದಿ ಆತ್ಮಹತ್ಯೆ

ಉ.ಪ್ರದೇಶ ಶಾಲಾ, ಕಾಲೇಜುಗಳಲ್ಲಿ ವಂದೇ ಮಾತರಂ ಕಡ್ಡಾಯಗೊಳಿಸಿದ ಯೋಗಿ ಆದಿತ್ಯನಾಥ್

ಮುಸ್ಲಿಮರ ನಮಾಜ್ ಸಮರ್ಥಿಸಲು ಹೋಗಿ ಹಿಂದೂಗಳು ಬಾರ್ ನಲ್ಲಿರ್ತಾರೆ ಎಂದ ಕೈ ನಾಯಕ ಆಂಜನೇಯ

ಮುಂದಿನ ಸುದ್ದಿ
Show comments