Publish Date: Thu, 23 Mar 2023 (16:00 IST)
Updated Date: Thu, 23 Mar 2023 (14:51 IST)
SC/SC ಮೀಸಲಾತಿ ಬಗ್ಗೆ ಕಾಂಗ್ರೆಸ್ ಆರೋಪಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮೀಸಲಾತಿ ಬಗ್ಗೆ ಮಾತನಾಡುವ ನೈತಿಕ, ರಾಜಕೀಯ ಅಧಿಕಾರ ಕಾಂಗ್ರೆಸ್‌ಗೆ ಇಲ್ಲ. ಅವರ ಸರ್ಕಾರ ಅಧಿಕಾರದ ಅವಧಿಯಲ್ಲಿ ಬೇಡಿಕೆ ಇದ್ದಾಗ ಏನೇನು ಮಾಡಿಲ್ಲ. ಮೀಸಲಾತಿ ಮಾಡಿ ಕಾನೂನು ಮಾಡಿ ಅದರ ಪ್ರಕಾರ ನೇಮಕಾತಿ ಕೂಡ ಶುರುವಾಗಿದೆ. 9ನೇ ಶೆಡ್ಯೂಲ್ಗೆ ಸೇರಿಸಲು ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆಯಾಗಿದೆ. ರಾಜ್ಯಪಾಲರಿಗೂ ಕೂಡ ಕಳುಹಿಸಲಾಗಿದೆ. ಅದಕ್ಕೆ ಕೆಲವು ನಿಯಮಾವಳಿಗಳಿದೆ, ಅದರಂತೆ AG ಸಲಹೆ ತೆಗೆದುಕೊಂಡು ನಾವು ಪ್ರೊಸಿಜರ್ ಮಾಡ್ತಿದ್ದೇವೆ ಎಂದು ತಿಳಿಸಿದ್ರು.