ಉಡುಪಿ : ಬಿಜೆಪಿ ರಾಜ್ಯ ಸರ್ಕಾರವು ಸಬ್ ಕಾ ಸಾಥ್.. ಸಬ್ ಕಾ ವಿಕಾಸ್ ದೃಷ್ಟಿಕೋನದಿಂದ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ತಿಳಿಸಿದರು.
ಉಡುಪಿಯಲ್ಲಿ ಜಿಲ್ಲಾ ಬೂತ್ ಮಟ್ಟದ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿಯನ್ನ ತಳಮಟ್ಟದಲ್ಲಿ ಬಲಪಡಿಸಿ.
ಬಿಜೆಪಿ ಸರ್ಕಾರಗಳ ವಿಶೇಷ ಸಾಧನೆಗಳನ್ನು ಜನರಿಗೆ ತಿಳಿಸುವ ಮೂಲಕ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲು ಶ್ರಮಿಸಿ ಎಂದು ಮನವಿ ಮಾಡಿದರು.