Select Your Language

Notifications

webdunia
webdunia
webdunia
webdunia

2 ದಿನ ಜೆಪಿ ನಡ್ಡಾ ರಾಜ್ಯ ಪ್ರವಾಸ

2 Days JP Nadda State Tour
bangalore , ಸೋಮವಾರ, 20 ಫೆಬ್ರವರಿ 2023 (16:46 IST)
ರಾಜ್ಯ ವಿಧಾನಸಭೆ ಚುನಾವಣೆಗೆ ದಿನಗಣನೆ ಶುರುವಾಗಿದೆ. ಪ್ರಮುಖ ಪ್ರಕ್ಷಗಳಾದ ಬಿಜೆಪಿ, ಕಾಂಗ್ರೆಸ್, ಜೆಡಿಎಸ್​ ಅಬ್ಬರದ ಪ್ರಚಾರದಲ್ಲಿ ತೊಡಗಿಸಿಕೊಂಡಿವೆ. ಕಾಂಗ್ರೆಸ್ ​ಮತ್ತು ಜೆಡಿಎಸ್​ ಪಕ್ಷಗಳ ಸ್ಥಳೀಯ ನಾಯಕರು ಅಖಾಡಕ್ಕೆ ಇಳಿದು ಪ್ರಚಾರದ ಭರಾಟೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಬಿಜೆಪಿಗರದು ಮಾತ್ರ ಭಿನ್ನವಾಗಿದ್ದು, ನಿರೀಕ್ಷೆಯಂತೆ ಕೇಂದ್ರ ನಾಯಕರನ್ನು ಮತಬೇಟೆಗೆ ಕರೆಸುತ್ತಿದ್ದಾರೆ. ಮತ್ತೆ ಜೆ.ಪಿ.ನಡ್ಡಾ ಇಂದಿನಿಂದ 2 ದಿನ ರಾಜ್ಯ ಪ್ರವಾಸ ಮಾಡಲಿದ್ದಾರೆ. ಈಗಾಗಲೆ ನಿನ್ನೆ (ಫೆ.19) ರಾತ್ರಿ ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಇಂದು ಉಡುಪಿ ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಉಡುಪಿಯ ಎಂಜಿಎಂ ಮೈದಾನದಲ್ಲಿ ನಡೆಯುವ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಬಳಿಕ ಉಡುಪಿ ಕೃಷ್ಣಮಠಕ್ಕೆ ಭೇಟಿ ನೀಡಲಿದ್ದಾರೆ. ನಂತರ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮುಳ್ಳಿಕಟ್ಟೆಯಲ್ಲಿ ನಡೆಯುವ ಸಮಾವೇಶದಲ್ಲಿ ಪಾಲ್ಗೊಳ್ಳುತ್ತಾರೆ

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತಷ್ಟು ತಾರಕಕ್ಕೇರಿದ ಇಬ್ಬರು ಅಧಿಕಾರಿಗಳ ಜಗಳ