Select Your Language

Notifications

webdunia
webdunia
webdunia
webdunia

ಅಂಚೆ ಇಲಾಖೆಯಲ್ಲಿ ಉದ್ಯೋಗವಕಾಶ: ನೇರ ನೇಮಕಾತಿ ಅರ್ಜಿ ಆಹ್ವಾನ

ಅಂಚೆ ಇಲಾಖೆಯಲ್ಲಿ ಉದ್ಯೋಗವಕಾಶ: ನೇರ ನೇಮಕಾತಿ ಅರ್ಜಿ ಆಹ್ವಾನ
bangalore , ಶುಕ್ರವಾರ, 31 ಡಿಸೆಂಬರ್ 2021 (19:45 IST)
ಅಂಚೆ ಇಲಾಖೆಯಲ್ಲಿ ಅಂಚೆ ನಿರೀಕ್ಷಕರ ನೇರ ನೇಮಕಾತಿಯು ಸಿಬ್ಬಂದಿ ನೇಮಕಾತಿ ಆಯೋಗದ ಜಿಜಿಎಲ್ ಇ 2021 ಪರೀಕ್ಷೆಯ ಮೂಲಕ ನಡೆಯಲಿದೆ.
ಇದರ ಅಧಿಸೂಚನೆ ಈಗಾಗಲೇ ಆಯೋಗದ ವೆಬ್‌ಸೈಟ್ https://ssc.nic.in ನಲ್ಲಿ ಲಭ್ಯವಿದೆ.
ಅರ್ಜಿ ಸಲ್ಲಿಸಲು ಜ. 23 ಕೊನೆಯ ದಿನವಾಗಿದೆ. ಮಾನ್ಯತೆ ಹೊಂದಿದ ವಿಶ್ವವಿದ್ಯಾನಿಲಯದ ಯಾವುದೇ ಪದವಿ ಅಥವಾ ತತ್ಸಮಾನ ಪದವಿ ಪಡೆದಿರಬೇಕು. 2022ರ ಜ. 1ಕ್ಕೆ ಅನ್ವಯವಾಗುವಂತೆ 18ರಿಂದ 30 ವರ್ಷ (ಇತರ ವರ್ಗಗಳಿಗೆ ಅರ್ಹ ಸಡಿಲಿಕೆಯೊಂದಿಗೆ ) ಹೊಂದಿದವರಿಗೆ ಅವಕಾಶ ಇರುತ್ತದೆ.
ಆಸಕ್ತರು https://ssc.nic.in ಗೆ ಭೇಟಿ ನೀಡಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ವಿಧಾನ, ವೇತನ ಶ್ರೇಣಿ, ವಯೋಮಿತಿ, ಮೀಸಲಾತಿ, ಪರೀಕ್ಷಾ ವಿಧಾನ, ಶುಲ್ಕ ಹಾಗೂ ಇನ್ನಿತರ ವಿಷಯಗಳ ಬಗ್ಗೆ ಮಾಹಿತಿಯು ಆಯೋಗದ ವೆಬ್‌ಸೈಟ್‌ನಲ್ಲಿರುವ ನೋಟಿಫಿಕೇಷನ್‌ನಲ್ಲಿ ಲಭ್ಯವಿದೆ ಎಂದು ಪ್ರಕಟಣೆ ತಿಳಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ದೇಶದಲ್ಲಿ 1 ಸಾವಿರ ಗಡಿ ದಾಟಿದ ಓಮಿಕ್ರಾನ್‌