Publish Date: Tue, 27 Oct 2026 (15:01 IST)
Updated Date: Tue, 27 Oct 2026 (15:03 IST)
ಬೆಳಗಾವಿ: ನೀವು ತಾಳ್ಮೆಯಿಲ್ಲದೇ ದುಡ್ಡು ಕೊಡಿ ಎಂದ ತಕ್ಷಣ ಕೊಡಕ್ಕೆ ಇದು ನನ್ನ ಸ್ವಂತ ದುಡ್ಡಲ್ಲ. ಸರ್ಕಾರದ ಬೊಕ್ಕಸದಲ್ಲಿ ದುಡ್ಡಿದ್ರೆ ತಾನೇ ಕೊಡೋದು ಎಂದು ಡಿಕೆ ಶಿವಕುಮಾರ್ ಕಬ್ಬು ಬೆಳೆಗಾರರ ಮುಂದೆ ಹೇಳಿದ್ದ ವಿಡಿಯೋ ಹಂಚಿಕೊಂಡಿರುವ ಜೆಡಿಎಸ್ ಸಿಎಂಗೆ ಟಾಂಗ್ ಕೊಟ್ಟಿದೆ.
ಕಳೆದ ಕೆಲವು ದಿನಗಳಿಂದ ಹೋರಾಟ ನಡೆಸುತ್ತಿರುವ ಕಬ್ಬು ಬೆಳೆಗಾರರು ಮತ್ತು ಕಾರ್ಖಾನೆ ಮಾಲಿಕರ ಜೊತೆ ಸಭೆ ನಡೆಸುವಾಗ ಡಿಕೆ ಶಿವಕುಮಾರ್ ನೀವು ತಾಳ್ಮೆಯಿಲ್ಲದೇ ಕಿರುಚಿದ ತಕ್ಷಣ ಡಿಕೆ ಶಿವಕುಮಾರ್ ತಂದು ಕೊಡಕ್ಕೆ ಇದು ನನ್ನ ಸ್ವಂತ ದುಡ್ಡಲ್ಲ. ಇದು ಸರ್ಕಾರದ ದುಡ್ಡು. ಸರ್ಕಾರದ ಬೊಕ್ಕಸದಲ್ಲಿ ದುಡ್ಡಿದ್ದರೆ ತಾನೇ ಕೊಡೋದು ಎಂದಿದ್ದರು.
ಅವರ ಈ ವಿಡಿಯೋ ತುಣುಕನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಜೆಡಿಎಸ್ ಬೊಕ್ಕಸದಲ್ಲಿ ದುಡ್ಡಿಲ್ಲ ಎಂದು ಹೇಳಲು ಇಷ್ಟು ದಿನ ಬೇಕಾಯ್ತಾ ಸಿಎಂಗೆ ಟಾಂಗ್ ಕೊಟ್ಟಿದೆ. ಗ್ಯಾರಂಟಿ' ಕೊಟ್ಟು, ಈಗ ಸರ್ಕಾರದ ಬೊಕ್ಕಸ ಖಾಲಿ ಅಂತ ಒಪ್ಪಿಕೊಂಡ್ರಲ್ಲಾ!
ಚುನಾವಣೆಗೂ ಮುಂಚೆ ಬೊಕ್ಕಸದಲ್ಲಿ ದುಡ್ಡಿತ್ತು ಅಂತಾನೇ ಅಲ್ವಾ ಬೇಕಾಬಿಟ್ಟಿ ಭರವಸೆಗಳ ಮಹಾಪೂರವನ್ನೇ ಹರಿಸಿದ್ದು? ಈಗ ರೈತರಿಗೆ ಕೊಡೋಕೆ ಜೇಬಲ್ಲಿ ಕಾಸಿಲ್ಲ. ಖಜಾನೆ ಖಾಲಿ ಮಾಡಿ, ಅಭಿವೃದ್ಧಿ ಮರೆತು, ರೈತರಿಗೆ ಪರಿಹಾರ ನೀಡಲೂ ಕಾಸಿಲ್ಲ ಎನ್ನುವ ದುಸ್ಥಿತಿಗೆ ರಾಜ್ಯವನ್ನು ತಂದಿಟ್ಟಿದ್ದೇ ನಿಮ್ಮ ಸರ್ಕಾರದ ಸಾಧನೆಯೇ ಡಿಕೆ ಶಿವಕುಮಾರ್? ಎಂದು ಪ್ರಶ್ನೆ ಮಾಡಿದೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ