Daily Horoscope

Select Your Language

Notifications

webdunia
webdunia
webdunia
webdunia

ಹೇ ರಾಹುಲ್ ಗಾಂಧಿ ನನ್ನ ತಳ್ಳಲಿಲ್ಲಪ್ಪಾ.. ಡಿಕೆ ನಿಧಾನವಾಗಿರು ಎಂದಿದ್ರು ಅಷ್ಟೇ: ಡಿಕೆ ಶಿವಕುಮಾರ್ ಸ್ಪಷ್ಟನೆ

DK Shivakumar
ಬೆಂಗಳೂರು: ಮೊನ್ನೆಯಷ್ಟೇ ದೆಹಲಿಯಲ್ಲಿ ಎಸ್ಐಆರ್ ವಿರುದ್ಧ ಪ್ರತಿಭಟನೆ ವೇಳೆ ಕರ್ನಾಟಕ ಸಿಎಂ ಡಿಕೆ ಶಿವಕುಮಾರ್ ಅವರ ಪೈಜಾಮ ಹಿಡಿದು ರಾಹುಲ್ ಗಾಂಧಿ ತಳ್ಳಿದ ವಿಡಿಯೋ ವೈರಲ್ ಆಗಿತ್ತು. ಅದಕ್ಕೀಗ ಡಿಕೆಶಿ ಸ್ಪಷ್ಟನೆ ಕೊಟ್ಟಿದ್ದಾರೆ.

ಸಾಕಷ್ಟು ಜನರ ಮಧ್ಯೆ ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಜೊತೆಗೆ ಡಿಕೆ ಶಿವಕುಮಾರ್ ಕೂಡಾ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಡಿಕೆಶಿ ಮುಂದಿದ್ದರೆ ಅವರ ಹಿಂದೆಯೇ ರಾಹುಲ್ ಗಾಂಧಿ ಇದ್ದರು. ಮುನ್ನುಗ್ಗುವ ಭರದಲ್ಲಿ ಎಲ್ಲಾ ಕಾರ್ಯಕರ್ತರನ್ನು ತಳ್ಳಿದಂತೆ ಸಿಎಂ ಡಿಕೆ ಶಿವಕುಮಾರ್ ಅವರನ್ನೂ ರಾಹುಲ್ ಹಿಡಿದೆಳೆದು ಮುಂದೆ ಸಾಗಿದ್ದರು.

ಈ ವಿಡಿಯೋ ಸಾಕಷ್ಟು ಟ್ರೋಲ್ ಗೊಳಗಾಗಿತ್ತು. ಬಿಜೆಪಿಯಂತೂ ಈ ವಿಡಿಯೋ ಹಂಚಿಕೊಂಡು ಇದು ಹೈಕಮಾಂಡ್ ಮುಂದೆ ಡಿಕೆ ಶಿವಕುಮಾರ್ ಅವಸ್ಥೆ ಎಂದು ಲೇವಡಿ ಮಾಡಿತ್ತು. ನೆಟ್ಟಿಗರಲ್ಲಿ ಕೆಲವರು ಡಿಕೆಶಿ ಒಬ್ಬ ಚುನಾಯಿತ ಸಿಎಂ. ಅವರನ್ನು ಹೀಗೆ ನಡೆಸಿಕೊಂಡಿದ್ದು ಸರಿಯಲ್ಲ ಎಂದಿದ್ದರು.

ಆದರೆ ಸ್ವತಃ ಸಿಎಂ ಡಿಕೆಶಿಯವರೇ ಈ ಬಗ್ಗೆ ಇದೀಗ ಸ್ಪಷ್ಟನೆ ಕೊಟ್ಟಿದ್ದಾರೆ. ‘ನನ್ನನ್ನು ಯಾರೂ ತಳ್ಳಲಿಲ್ಲಪ್ಪಾ.. ನಾನು ಆ ಜಾಗದಿಂದ ಹೊರಟು ಹೋದೆ. ಜನರ ವೇಗ ತುಂಬಾ ಜೋರಾಗಿತ್ತು. ಅನೇಕರು ಕೆಳಗೆ ಬೀಳುತ್ತಿದ್ದರು. ಆಗ ರಾಹುಲ್ ಗಾಂಧಿಯವರು ನನಗೆ ಡಿಕೆ ನಿಧಾನವಾಗಿರಿ ಎಂದು ಹೇಳುತ್ತಿದ್ದರು ಅಷ್ಟೇ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.
ಆದರೆ ಇದಕ್ಕೂ ಬಿಜೆಪಿ ಟಾಂಗ್ ಕೊಟ್ಟಿದ್ದು, ಎಷ್ಟಿದ್ದರೂ ಹೈಕಮಾಂಡ್ ಕೆಮ್ಮಂಗಿಲ್ಲ ಎಂದು ವ್ಯಂಗ್ಯ ಮಾಡಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಕೇವಲ ಐಫೋನ್ ಗಾಗಿ ಇಂಥಾ ಹುಚ್ಚಾಟವೇ… ದುಬಾರಿ ಫೋನ್ ಗಾಗಿ ಈ ಹುಡುಗಿ ಮಾಡಿದ ಕೆಲಸ ನೋಡಿ video