Select Your Language

Notifications

webdunia
webdunia
webdunia
webdunia

ಜೂನ್ 12 ರಂದು ಜೆಡಿಎಸ್ ಭಿನ್ನಮತಿಯರ ಯುಗಾಂತ್ಯ: ಪುಟ್ಟರಾಜು

ಜೂನ್ 12 ರಂದು ಜೆಡಿಎಸ್ ಭಿನ್ನಮತಿಯರ ಯುಗಾಂತ್ಯ: ಪುಟ್ಟರಾಜು
ಮಂಡ್ಯ , ಮಂಗಳವಾರ, 7 ಜೂನ್ 2016 (14:48 IST)
ಜೆಡಿಎಸ್‌ ಪಕ್ಷದ ಕಳಂಕವನ್ನು ತೊಳೆಯಲು ಜೂನ್ 12 ರಂದು ಮಹೂರ್ತ ಪಿಕ್ಸ್ ಆಗಿದೆ ಎಂದು ಜೆಡಿಎಸ್ ಸಂಸದ ಪುಟ್ಟರಾಜು ಭಿನ್ನಮತಿಯರಿಗೆ ಟಾಂಗ್ ನೀಡಿದ್ದಾರೆ.
 
ಮಂಡ್ಯ ಜೆಡಿಎಸ್ ಪಕ್ಷದಲ್ಲಿ ಭಿನ್ನಮತ ಸ್ಫೋಟವಾಗಿದೆ. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ನೇತೃತ್ವದಲ್ಲಿ ಮದ್ದೂರಿನಲ್ಲಿ ನಡೆಯುತ್ತಿರುವ ದಕ್ಷಿಣ ಪದವೀಧರ ಚುನಾವಣೆಗೆ ಪಕ್ಷದ ಅಭ್ಯರ್ಥಿ ಪ್ರಚಾರ ಸಭೆಯಲ್ಲಿ ಶಾಸಕ ಚಲುವರಾಯಸ್ವಾಮಿ ಭಾವಚಿತ್ರ ಔಟ್ ಆಗಿದ್ದು, ಈ ಮೂಲಕ ಜೆಡಿಎಸ್ ಭಿನ್ನಮತಿಯರಿಗೆ ಟಾಂಗ್ ನೀಡಿದೆ.
 
ಈ ಕುರಿತು ಮದ್ದೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜೆಡಿಎಸ್ ಸಂಸದ ಪುಟ್ಟರಾಜು, ಪಕ್ಷದ ಕಳಂಕವನ್ನು ತೊಳೆಯಲು ಜೂನ್ 12 ರಂದು ಮಹೂರ್ತ ಪಿಕ್ಸ್ ಆಗಿದೆ. ಕೆಲವರು ಪಕ್ಷದಿಂದ ಚಿಗುರಿ ಪಕ್ಷವನ್ನೇ ಚಿವುಟಲು ಹೊರಟಿದ್ದಾರೆ. ರಾಜ್ಯಧ್ಯಕ್ಷ ಕುಮಾರಸ್ವಾಮಿ ಅವರು ಜೆಡಿಎಸ್ ಪಕ್ಷವನ್ನು ಚಿಗುರಿಸುವ ಹೊಣೆ ಹೊರಬೇಕು ಎಂದು ಹೇಳಿದ್ದಾರೆ.
 
ಪಕ್ಷದ ಐವರು ಶಾಸಕರಾದ ಜಮೀರ್ ಅಹ್ಮದ್, ಶ್ರೀನಿವಾಸ್, ಚೆಲುವರಾಯ ಸ್ವಾಮಿ, ಬಾಲಕೃಷ್ಣ ಮತ್ತು ಇಕ್ಬಾಲ್ ಅನ್ಸಾರಿ ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಮೂರನೇಯ ಅಭ್ಯರ್ಥಿ ಕೆ.ಸಿ.ರಾಮಮೂರ್ತಿ ಅವರನ್ನು ಬೆಂಬಲಿಸುವುದಾಗಿ ಕರ್ನಾಟಕದ ಕಾಂಗ್ರೆಸ್ ಉಸ್ತುವಾರಿ ದಿಗ್ವೀಜಯ್ ಸಿಂಗ್‌ ಅವರಿಗೆ ಭರವಸೆ ನೀಡಿದ್ದರಿಂದ ರಾಜ್ಯ ಜೆಡಿಎಸ್ ಪಕ್ಷದಲ್ಲಿ ಭಿನ್ನಮತ ಸ್ಫೋಟವಾಗಿದೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಗಗನಯಾತ್ರಿ ಕಲ್ಪನಾ ಚಾವ್ಲಾಗೆ ಮೋದಿ ಗೌರವ ವಂದನೆ