ಪಂಚ ರಾಷ್ಟ್ರಗಳ ಪ್ರವಾಸದ ಭಾಗವಾಗಿ ಇಂದು ಅಮೇರಿಕ ತಲುಪಿರುವ ಪ್ರಧಾನಿ ಮೋದಿ ಭಾರತ ಮೂಲದ ಗಗನಯಾತ್ರಿ ದಿವಂಗತ ಕಲ್ಪನಾ ಚಾವ್ಲಾ ಅವರ ಸಮಾಧಿಗೆ ತೆರಳಿ ಪುಷ್ಪನಮನ ಸಲ್ಲಿಸಿದರು.
ಬಳಿಕ ಪ್ರಧಾನಿ ಕಲ್ಪನಾ ಚಾವ್ಲಾ ಅವರ ಪತಿ, ಕುಟುಂಬ ಸದಸ್ಯರು, ನಾಸಾದ ಹಿರಿಯ ಅಧಿಕಾರಿಗಳು ಮತ್ತು ಭಾರತೀಯ ಮೂಲದ ಅಮೇರಿಕನ್ ಅಂತರಿಕ್ಷ ಯಾತ್ರಿ ಸುನಿತಾ ವಿಲಿಯನ್ಸ್ ಮತ್ತು ಅವರ ತಂದೆಯವರ ಜತೆ ಮಾತನಾಡಿದರು.
ಪ್ರಧಾನಿ ನಮ್ಮನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದು ಬಹಳ ಸಂತೋಷ ತಂದಿದೆ. ನನ್ನ ತಂದೆಯೊಂದಿಗೆ ಗುಜರಾತಿಯಲ್ಲಿ ಮಾತನಾಡಿದ ಪ್ರಧಾನಿ ಭಾರತಕ್ಕೆ ಬರುವಂತೆ ಆಹ್ವಾನವಿತ್ತಿದ್ದಾರೆ, ಆರೋಗ್ಯ ಸುಧಾರಿಸಿದ ಬಳಿಕ ಭಾರತಕ್ಕೆ ಭೇಟಿ ನೀಡುವುದಾಗಿ ನನ್ನ ತಂದೆ ಪ್ರಧಾನಿಯವರ ಬಳಿ ಹೇಳಿದ್ದಾರೆ ಎಂದು ಸುನೀತಾ ವಿಲಿಯಂ ಪ್ರತಿಕ್ರಿಯಿಸಿದ್ದಾರೆ.
ಅಮೆರಿಕದ ರಕ್ಷಣಾ ಕಾರ್ಯದರ್ಶಿ ಆಸ್ಟನ್ ಕಾರ್ಟರ್, ಅಮೆರಿಕಾದ ಭಾರತೀಯ ರಾಯಭಾರಿ ಅರ್ಜುನ್ ಕೆ. ಸಿಂಗ್, ವಿದೇಶಾಂಗ ಕಾರ್ಯದರ್ಶಿ ಎಸ್. ಜೈಶಂಕರ್, ಭಾರತದಲ್ಲಿರುವ ಅಮೆರಿಕದ ರಾಯಭಾರಿ ರಿಚರ್ಡ್ ವರ್ಮಾ, ದಕ್ಷಿಣ ಮತ್ತು ಮಧ್ಯ ಏಷ್ಯಾ ರಾಜ್ಯ ಸಹಾಯಕ ಕಾರ್ಯದರ್ಶಿ ನಿಶಾ ದೇಸಾಯಿ ಬಿಸ್ವಾಲ್ ಸಹ ಪ್ರಧಾನಿ ಜತೆ ಉಪಸ್ಥಿತರಿದ್ದರು.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ
ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.