Select Your Language

Notifications

webdunia
webdunia
webdunia
webdunia

ಅನ್ನಭಾಗ್ಯಕ್ಕೆ ಇಂದಿರಾ ಹೆಸರು: ಬಸವಣ್ಣನವರ ಹೆಸರು ನೆನಪಾಗಲಿಲ್ವೇ ಸಿದ್ದರಾಮಯ್ಯನವರೇ

Siddaramaiah

Krishnaveni K

ಬೆಂಗಳೂರು , ಶುಕ್ರವಾರ, 10 ಅಕ್ಟೋಬರ್ 2025 (11:30 IST)
ಬೆಂಗಳೂರು: ಅನ್ನಭಾಗ್ಯ ಯೋಜನೆಗೆ ಇದೀದ ಇಂದಿರಾ ಆಹಾರ ಕಿಟ್ ಎಂದು ಮರುನಾಮಕರಣ ಮಾಡಲಾಗಿದೆ. ಇದಕ್ಕೆ ಜೆಡಿಎಸ್ ಪಕ್ಷ ಸೇರಿದಂತೆ ಸಾರ್ವಜನಿಕರೂ ಟೀಕೆ ಮಾಡಿದ್ದು, ಈಗ ನಿಮಗೆ ಬಸವಣ್ಣನವರ ಹೆಸರು ನೆನಪಾಗಲಿಲ್ವೇ ಎಂದು ವ್ಯಂಗ್ಯ ಮಾಡಿದ್ದಾರೆ.

ಇತ್ತೀಚೆಗೆ ನನಗೆ ಅಧಿಕಾರ ಇದ್ದಿದ್ದರೆ ನಮ್ಮ ಮೆಟ್ರೋಗೆ ಬಸವ ಮೆಟ್ರೋ ಎಂದು ಹೆಸರಿಡುತ್ತಿತ್ತೆ. ಹೀಗಾಗಿ ಕೇಂದ್ರಕ್ಕೆ ಬಸವ ಮೆಟ್ರೋ ಹೆಸರಿಡಲು ಶಿಫಾರಸ್ಸು ಮಾಡುವುದಾಗಿ ಹೇಳಿದ್ದರು. ಆದರೆ ಈಗ ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಗೆ ಇಂದಿರಾ ಕಿಟ್ ಎಂದು ಹೆಸರಿಡಲಾಗಿದೆ.

ಈಗ ಬಸವಣ್ಣನವರು, ವಾಲ್ಮೀಕಿ, ಸಿದ್ದಗಂಗಾ ಸ್ವಾಮೀಜಿಗಳ ಹೆಸರು ನೆನಪಾಗಲಿಲ್ವೇ? ಕೇಂದ್ರದ ಯೋಜನೆಗಳಿಗೆ ಮಾತ್ರ ಇವರೆಲ್ಲರ ಹೆಸರು ನೆನಪಾಗುತ್ತಾ? ಅನ್ನಭಾಗ್ಯ ಯೋಜನೆ ರಾಜ್ಯದ್ದೇ ಆಗಿತ್ತು. ಈ ಯೋಜನೆಗೆ ಬಸವ ಆಹಾರ ಕಿಟ್ ಎಂದು ಇಡಬಹುತ್ತಿಲ್ಲವೇ ಎಂದು ಸಾರ್ವಜನಿಕರು ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನೆ ಮಾಡಿದ್ದಾರೆ.

ಇನ್ನು ಜೆಡಿಎಸ್ ತನ್ನ ಎಕ್ಸ್ ಪುಟದಲ್ಲಿ ಇದೇ ವಿಚಾರವಾಗಿ ಸಿದ್ದರಾಮಯ್ಯನವರನ್ನು  ಪ್ರಶ್ನೆ ಮಾಡಿದೆ. ‘ಗುಲಾಮಿ ಕಾಂಗ್ರೆಸ್ ಸರ್ಕಾರದ ದ್ವಿಮುಖ ನೀತಿಗೆ ಧಿಕ್ಕಾರ ! ಅನ್ನಭಾಗ್ಯ ಯೋಜನೆಯ ಆಹಾರ ಕಿಟ್‌ಗೆ "ಇಂದಿರಾ ಕಿಟ್" ಹೆಸರಿಡುವ ಬದಲು,  ಬಸವಣ್ಣ ಕಿಟ್, ವಾಲ್ಮೀಕಿ ಕಿಟ್, ಸಿದ್ಧಗಂಗಾ ಕಿಟ್ ಎಂದು ಹೆಸರಿಡಲು ನಿಮ್ಮನ್ನು ತಡೆದವರು ಯಾರು ? ಸಿಎಂ ಸಿದ್ದರಾಮಯ್ಯನವರೇ, ಡಿಸಿಎಂ ಡಿಕೆ ಶಿವಕುಮಾರ್ ಕೇಂದ್ರ ಮತ್ತು ರಾಜ್ಯ ಸರ್ಕಾರದ ಜಂಟಿ ಯೋಜನೆಗಳ ವಿಚಾರವಾಗಿ ಕೇಂದ್ರದತ್ತ ಬೊಟ್ಟುಮಾಡುವ ಸಿದ್ದರಾಮಯ್ಯ, ರಾಜ್ಯದ ಯೋಜನೆಗಳಿಗೆ ಹೆಸರಿಡುವಾಗ ಕನ್ನಡದ ಮಹಾನೀಯರು ಜ್ಞಾಪಕಕ್ಕೆ ಬರುವುದಿಲ್ಲವೇ ? ಕಾಂಗ್ರೆಸ್‌ ಸರ್ಕಾರದ ಕಣ್ಣಿಗೆ ಕಾಣುವುದಿಲ್ಲವೇ ?’ ಎಂದು ಪ್ರಶ್ನೆ ಮಾಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿ ಮೋದಿ ಎಂದರೆ ಏನು ರೆಸ್ಪೆಕ್ಟ್: ಮೀಟಿಂಟ್ ಬಿಟ್ಟು ಓಡಿ ಬಂದ ನೆತನ್ಯಾಹು