Publish Date: Sat, 30 Apr 2022 (09:54 IST)
Updated Date: Sat, 30 Apr 2022 (09:56 IST)
ಹುಬ್ಬಳ್ಳಿ ಗಲಭೆಕೋರರ ಕುಟುಂಬಗಳಿಗೆ ಫುಡ್ ಕಿಟ್ ಹಾಗೂ ಧನಸಹಾಯ ವಿತರಿಸಲು ಮುಂದಾಗುವ ಮೂಲಕ ಶಾಸಕ ಜಮೀರ್ ಅಹಮದ್ ಕಾನ್ ಮತ್ತೆ ವಿವಾದದ ಕಿಡಿ ಹತ್ತಿಸಿದ್ದಾರೆ
ಬೆಂಗಳೂರು : ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಮತ್ತೊಮ್ಮೆ, ಸಮಾಜ ವಿರೋಧಿಗಳು, ಸಂವಿಧಾನ ವಿರೋಧಿಗಳ ಬೆಂಬಲಕ್ಕೆ ನಿಲ್ಲುವ ಮೂಲಕ ವಿವಾದದ ಕಿಡಿ ಹೊತ್ತಿಸಿದ್ದಾರೆ. ಕಲ್ಲು ಹೊಡೆದ್ರೆ ಕಾಸು ಸಿಗುತ್ತದೆ ಅನ್ನೋದನ್ನ ಸಾಬೀತು ಮಾಡಲು ಜಮೀರ್ ಅಹ್ಮದ್ ಹೊರಟಿದ್ದಾರೆ.
ಹುಬ್ಬಳ್ಳಿ ಗಲಭೆಕೋರರಿಗೆ ಆಹಾರ ಹಾಗೂ ಹಣ ನೀಡಲು ಹೊರಟಿದ್ದರು ಜಮೀರ್ ಅಹ್ಮದ್ ಖಾನ್. ಬಂಧನಕ್ಕೆ ಒಳಗಾಗಿರುವ ಮನೆಯವರನ್ನು ಕರೆದು ಫುಡ್ ಕಿಟ್ ಹಾಗೂ ಹಣ ನೀಡಲು ಶಾಸಕ ಯೋಜನೆ ರೂಪಿಸಿದ್ದರು. ರಂಜಾನ್ ನೆಪ ಮಾಡಿಕೊಂಡು ಗಲಭೆಕೋರ ಕುಟುಂಬಗಳ ನೆರವಿಗೆ ನಿಲ್ಲುವ ಯತ್ನ ಮಾಡಿದ್ದರು.
ಈಗಾಗಲೇ ಬಂಧನದಲ್ಲಿರುವ ಆರೋಪಿಗಳ ಕುಟುಂಬಕ್ಕೆ ರೇಷನ್ ಹಾಗೂ 5 ಸಾವಿರ ರೂಪಾಯಿ ನೀಡಲು ಜಮೀರ್ ಅಹ್ಮದ್ ತಮ್ಮ ಬೆಂಬಲಿಗರಿಗೆ ಸೂಚಿಸಿದ್ದರು. ಅದರಂತೆಯೇ ಬೆಂಬಲಿಗರು ಕೂಡ ಆಹಾರ ಹಾಗೂ ಹಣವನ್ನು ನೀಡಲು ಯೋಜನೆಯನ್ನು ರೂಪಿಸಿದ್ದರು.