Select Your Language

Notifications

webdunia
webdunia
webdunia
Wednesday, 9 April 2025
webdunia

ತಹಸೀಲ್ದಾರ್ ಗೆ 3 ತಿಂಗಳ ಜೈಲು!

bagalakotte
bagalakote , ಶನಿವಾರ, 17 ಜುಲೈ 2021 (20:22 IST)
ನ್ಯಾಯಾಲಯದ ಆದೇಶ ಉಲ್ಲಂಘಿಸಿದ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ವಿಶೇಷ ತಹಸೀಲ್ದಾರ್ ಎಸ್.ಬಿ. ಕಾಂಬಳೆಯವರಿಗೆ ಬನಹಟ್ಟಿ ಹಿರಿಯ ದಿವಾಣಿ ನ್ಯಾಯಾಧೀಶ ಕಿರಣಕುಮಾರ ವಡಿಗೇರಿ 3 ತಿಂಗಳ ಸಾದಾ ಜೈಲು ಶಿಕ್ಷೆ ವಿಧಿಸಿದೆ.
ಹೌದು, ನಾವಲಗಿ ಗ್ರಾಮದ ಅಣ್ಣಪ್ಪ ಹಣಮಂತ ಮಾಂಗ ಹಾಗು ಇತರರು ಸೇರಿ ನ್ಯಾಯಾಲಯದ ನಿಂದನೆ ಪ್ರಕರಣವನ್ನು ಜಮಖಂಡಿಯಲ್ಲಿ ದಾಖಲಿಸಿದ್ದರು. ನಂತರದ ದಿನಗಳಲ್ಲಿ ಬನಹಟ್ಟಿಯಲ್ಲಿ ಹಿರಿಯ ಶ್ರೇಣಿ ದಿವಾಣಿ ನ್ಯಾಯಾಲಯ ಸ್ಥಾಪನೆಗೊಂಡ ಕಾರಣ ಪ್ರಕರಣ ವರ್ಗಾವಣೆಗೊಂಡಿತ್ತು. 
ಮಾಂಗ ಎಂಬುವರು ಕಂದಾಯ ನಿರೀಕ್ಷಕರಿಗೆ ಅರ್ಜಿ ನೀಡದೆಯೂ ಹಕ್ಕು ಬದಲಾವಣೆ ಮಾಡಿದ್ದರಿಂದ ಜೈಲು ಶಿಕ್ಷೆಗೆ ಗುರಿಪಡಿಸಲಾಗಿದೆ ಎಂದು ತಿಳಿದು ಬಂದಿದೆ.
ಬನಹಟ್ಟಿ ನ್ಯಾಯಾಲಯ ಮತ್ತುರಜಾ ಕಾಲದ ಜಿಲ್ಲಾ ನ್ಯಾಯಾಲಯಗಳು ಎರಡು ಬಾರಿ ಸ್ಟೇ ಆದೇಶ ಮಾಡಿತ್ತು. ಹೀಗಾಗಿ ಈ ಕುರಿತು ತಹಶೀಲ್ದಾರ ಹಾಗು ಜಿಲ್ಲಾಧಿಕಾರಿಗಳು ತಿಳುವಳಿಕೆ ಪತ್ರ ನೀಡಿದ್ದರೂ ಇವೆಲ್ಲವುಗಳನ್ನು ಗಣನೆಗೆ ತೆಗೆದುಕೊಳ್ಳದೆ ಉತಾರೆಯಲ್ಲಿ ಬದಲಾವಣೆ ಮಾಡಿದ್ದರು ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯಪಾಲರಿಗೆ ಅಕ್ರಮ ಗಣಿಗಾರಿಕೆಯ ದೂರು ನೀಡಿದ ಸುಮಲತಾ