Select Your Language

Notifications

webdunia
webdunia
webdunia
webdunia

ಸಿಎಂ 12 ಬಾರಿ ಬಜೆಟ್ ಮಂಡಿಸಿದ್ರೂ, ಆರ್ಥಿಕ ನಿರ್ವಹಣೆಯಲ್ಲಿ ವಿಫಲ: ಶೆಟ್ಟರ್ ಆರೋಪ

ಸಿಎಂ 12 ಬಾರಿ ಬಜೆಟ್ ಮಂಡಿಸಿದ್ರೂ, ಆರ್ಥಿಕ ನಿರ್ವಹಣೆಯಲ್ಲಿ ವಿಫಲ: ಶೆಟ್ಟರ್ ಆರೋಪ
ಬೆಂಗಳೂರು , ಸೋಮವಾರ, 20 ಮಾರ್ಚ್ 2017 (13:16 IST)
12 ಬಾರಿ ವಿತ್ತ ಸಚಿವರಾಗಿ ಬಜೆಟ್ ಮಂಡಿಸಿದ ಸಿಎಂ ಸಿದ್ದರಾಮಯ್ಯ ಅವರೇ ಆರ್ಥಿಕ ನಿರ್ವಹಣೆಯಲ್ಲಿ ಎಡವಿದ್ದಾರೆ ಎಂದು ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಆರೋಪಿಸಿದ್ದಾರೆ.
 
ಬಜೆಟ್ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ದುರಾಡಳಿತದಿಂದ ರಾಜ್ಯದ ಖಜಾನೆ ಸಾಲದ ಹೊರೆಯಿಂದ ತತ್ತರಿಸುತ್ತಿದೆ ಎಂದು ಕಿಡಿಕಾರಿದರು. 
 
ಸಿಎಂ ಸಿದ್ದರಾಮಯ್ಯ ಅವರೇ ಹೆಚ್ಚು ಸಾಲ ಮಾಡಿ ಆರ್ಥಿಕ ನಿರ್ವಹಣೆಯಲ್ಲಿ ವಿಫಲವಾಗಿದ್ದಾರೆ. ರಾಜ್ಯದ ಬೊಕ್ಕಸಕ್ಕೆ ಸಾಲದ ಹೊರೆಯಾಗಿಸಿದ್ದಾರೆ. ದೇಶದಲ್ಲಿ ಜಿಡಿಪಿ ದರ ಹೆಚ್ಚಾಗುತ್ತಿದ್ದರೆ, ರಾಜ್ಯದಲ್ಲಿ ಜಿಡಿಪಿ ದರದಲ್ಲಿ ಕುಸಿತವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
 
ರೈತರ ಸಾಲ ಮನ್ನಾ ಮಾಡುವ ನಿರೀಕ್ಷೆ ಹುಸಿಯಾಗಿದೆ. ಈ ವರ್ಷವೇ 37 ಸಾವಿರ ಕೋಟಿ ಋುಣಭಾರ ಹೊರಿಸಲಾಗಿದೆ ಎಂದು ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಜಿಯೋಗೆ ಸೆಡ್ಡು.. ವೊಡಫೋನ್-ಐಡಿಯಾ ವಿಲೀನ..