Select Your Language

Notifications

webdunia
webdunia
webdunia
webdunia

ಜಿಯೋಗೆ ಸೆಡ್ಡು.. ವೊಡಫೋನ್-ಐಡಿಯಾ ವಿಲೀನ..

ಜಿಯೋಗೆ ಸೆಡ್ಡು.. ವೊಡಫೋನ್-ಐಡಿಯಾ ವಿಲೀನ..
ಬೆಂಗಳೂರು , ಸೋಮವಾರ, 20 ಮಾರ್ಚ್ 2017 (13:07 IST)
ಟೆಲಿಕಾಂ ಕ್ಷೇತ್ರದಲ್ಲಿ ರಿಲಯನ್ಸ್`ನ ಜಿಯೋ ಸೃಷ್ಟಿಸಿದ ಕ್ರಾಂತಿ ಇತರೆ ಟೆಲಿಕಾಂ ಕಂಪನಿಗಳು ನಿದ್ದೆಗೆಡುವಂತೆ ಮಾಡಿದೆ. ಜಿಯೋಗೆ ಸೆಡ್ಡು ಹೊಡೆಯಲು ಹೆಚ್ಚುವರಿ ಡೇಟಾ ಆಫರ್`ಗಳನ್ನ ಜನರ ಮುಂದಿಟ್ಟ ಟೆಲಿಕಾಂ ಕಂಪನಿಗಳು ಇದೀಗ ವಿಲೀನದ ಹಾದಿ ಹಿಡಿದಿವೆ.

ಬ್ರಿಟನ್ ಮೂಲದ ಪ್ರತಿಷ್ಠಿತ ವೊಡಾಫೋನ್ ಮತ್ತು ಭಾರತದ ಐಡಿಯಾ ಟೆಲಿಕಾಂ ಕಂಪನಿ ವಿಲೀನಗೊಂಡಿವೆ. ಈ ಮೂಲಕ ಅತಿ ದೊಡ್ಡ ಟೆಲಿಕಾಂ ಸೇವೆಯಾಗಿ ಹೊರಹೊಮ್ಮುವುದು ಇದರ ಉದ್ದೇಶವಾಗಿದೆ. ಕೆಲ ದಿನಗಳಲ್ಲೇ ಜಿಯೋ ಉಚಿತ ಆಫರ್ ಮೂಲಕ 100 ಮಿಲಿಯನ್(10 ಕೋಟಿ) ಗ್ರಾಹಕರನ್ನ ತಲುಪಿತ್ತು. ವೊಡಾಫೋನ್ ಮತ್ತು ಐಡಿಯಾ ರಿಲಯನ್ಸ್ ಕಂಪನಿಗೆ ಪ್ರತಿ ಸವಾಲು ಹಾಕಲು ಸಜ್ಜಾಗಿವೆ. ಈ ಎರಡೂ ಕಂಪನಿಗಳ ವಿಲೀನದಿಂದಾಗಿ ಜಿಯೋಗಿಂತಲೂ ದೊಡ್ಡ ನೆಟ್ವರ್ಕ್ ಏರ್ಪಡಲಿದ್ದು, 400 ಮಿಲಿಯನ್(40 ಕೋಟಿ) ಗ್ರಾಹಕರು ಒಂದೇ ಟೆಲಿಕಾಂ ಸೇವೆಯಡಿ ಬಂದಂತಾಗಿದೆ.

ಇದರಲ್ಲಿ ವೊಡಾಫೋನ್ ಬಂಡವಾಳ 828 ಬಿಲಿಯನ್ ಆಗಿದ್ದು, ಐಡಿಯಾ ಬಂಡವಾಳ 722 ಬಿಲಿಯನ್ ಆಗಿದೆ.
ಈ ಎರಡು ಬೃಹತ್ ಕಂಪನಿಗಳ ವಿಲೀನ ಟೆಲಿಕಾಂ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲಾಗಲಿದ್ದು, ಗ್ರಾಹಕರಿಗೆ ಮತ್ತಷ್ಟು ಉಚಿತ ಸೇವೆಯ ರಸದೌತಣ ಸಿಗುವುದು ಪಕ್ಕಾ ಆಗಲಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ವಿಧಾನಸಭೆಯಲ್ಲಿ ಸಿಎಂ-ಶೆಟ್ಟರ್ ನಡುವೆ ಮಾತಿನ ಚಕಮಕಿ