Publish Date: Sun, 24 May 2020 (17:44 IST)
Updated Date: Sun, 24 May 2020 (17:45 IST)
ಡಾ.ಚೆನ್ನವೀರ ಕಣವಿ ನಿವಾಸಕ್ಕೆ ಸಚಿವ ಜಗದೀಶ ಶೆಟ್ಟರ್ ಭೇಟಿ ನೀಡಿದ್ದರು.
ಈಚೆಗೆ ನಿಧನರಾದ ಡಾ.ಚೆನ್ನವೀರ ಕಣವಿ ಅವರ ಧರ್ಮಪತ್ನಿ ಶಾಂತಾದೇವಿ ಕಣವಿ ಅವರ ಶಿವಗಣಾರಾಧನೆ ಕಾರ್ಯಕ್ರಮದಲ್ಲಿ ಸಚಿವ ಜಗದೀಶ ಶೆಟ್ಟರ್ ಭಾಗಿಯಾದರು.
ಶಾಂತಾದೇವಿ ಕಣವಿ ಅವರು, ಚೆನ್ನವೀರ ಕಣವಿ ಅವರ ಧರ್ಮಪತ್ನಿಯಾಗಿ ಸಾರ್ಥಕ ಬದುಕು ನಡೆಸಿದವರು. ಕನ್ನಡದ ಸಾರಸ್ವತ ಲೋಕಕ್ಕೆ ಶಾಂತಾದೇವಿ ಕೂಡ ಅಮೂಲ್ಯ ಕೊಡುಗೆ ನೀಡಿದ್ದರು ಎಂದು ಶೆಟ್ಟರ್ ಸಂತಾಪ ವ್ಯಕ್ತಪಡಿಸಿದರು.
ಶಾಂತಾದೇವಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಪನೆ ಮಾಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.