Publish Date: Tue, 15 Feb 2022 (21:21 IST)
Updated Date: Tue, 15 Feb 2022 (21:23 IST)
ಬೆಂಗಳೂರು: ಇತ್ತೀಚೆಗೆ ವಕೀಲ ಜಗದೀಶ್ ಅವರನ್ನ ಪೊಲೀಸರು ಬಂಧಿಸಿದ್ದರು. ಇದೀಗ ವಕೀಲ ಜಗದೀಶ್ ಅವರನ್ನ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
ಅದರ ಜೊತೆಗೆ ಜಗದೀಶ್ ಅವರಿಗೆ ಮತ್ತಷ್ಟು ಶಾಕ್ ಎದುರಾಗಿದೆ.
ಕರ್ನಾಟಕ ಬಾರ್ ಕೌನ್ಸಿಲ್ ಹೈಬ್ರೀಡ್ ಸಭೆಯಲ್ಲಿ ಜಗದೀಶ್ ಗೆ ಸಂಬಂಧಿಸಿದಂತೆ ಮತ್ತೊಂದು ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಬಾರ್ ಕೌನ್ಸಿಲ್ ಮೆಂಬರ್ ವಿರುದ್ಧ ಅವಾಚ್ಯ ಶಬ್ದ ಬಳಕೆ ಜೊತೆಗೆ ಬಾರ್ ಕೌನ್ಸಿಲ್ ವಿರುದ್ಧ ಅನಗತ್ಯ ಸುಳ್ಳು ಹೇಳಿದ್ದಾರೆ ಎಂಬ ಆರೋಪದ ಮೇಲೆ ಬಾರ್ ಕೌನ್ಸಿಲ್, ಜಗದೀಶ್ ಅವರನ್ನ ಬ್ಯಾನ್ ಮಾಡಿದೆ. ಕರ್ನಾಟಕದಲ್ಲಿ ಇನ್ಮುಂದೆ ವಕೀಲಿಕೆ ಮಾಡಬಾರದು ಎಂದು ನಿರ್ಧಾರ ತೆಗೆದುಕೊಂಡಿದ್ದಾರೆ.
ವಕೀಲ ಜಗದೀಶ್ ಪುತ್ರ ಹಾಗೂ ಆಪ್ತರ ಮೇಲೆ ಹಲ್ಲೆ ನಡೆದಿದತ್ತು. ಈ ವೇಳೆ ಫೇಸ್ಬುಕ್ ಲೈವ್ ಬಂದಿದ್ದ ಲಾಯರ್ ಜಗದೀಶ್, ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್, ವಕೀಲರ ಸಂಘ, ಕೆಲವು ವಕೀಲರ ಬಗ್ಗೆ ಅವಾಚ್ಯ ಪದ ಬಳಸಿ ಮಾತನಾಡಿದ್ದರು.