Select Your Language

Notifications

webdunia
webdunia
webdunia
webdunia

ಪ್ರಜ್ವಲ್ ರೇವಣ್ಣನೇ ಮಲಿಕೊಂಡ, ಇನ್ನು ಶ್ರೇಯಸ್ ಯಾವ ಲೆಕ್ಕ: ದೇವರಾಜೇ ಗೌಡ

Lawyer Devarajegowda

Sampriya

ಹಾಸನ , ಶುಕ್ರವಾರ, 20 ಸೆಪ್ಟಂಬರ್ 2024 (19:59 IST)
ಹಾಸನ: ಪವರ್ ಫುಲ್ ವ್ಯಕ್ತಿಯಾಗಿರುವ ಹಾಸನ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣನೇ ಮಲಕೊಂಡಿದ್ದಾನೆ, ಇನ್ನು ಕಾಂಗ್ರೆಸ್ ಸಂಸದ ಶ್ರೇಯಸ್ ಪಟೇಲ್ ಯಾವ ಲೆಕ್ಕ ಎಂದು ವಕೀಲ ದೇವರಾಜೇಗೌಡ ಹೇಳಿದರು.

ಹಾಸನದಲ್ಲಿ ಸುದ್ದಿಗೋಷ್ಠಿಯಲ್ಲಿ ಸಂಸದ ಶ್ರೇಯಸ್ ಪಟೇಲ್ ವಿರುದ್ಧ ಚುನಾವಣಾ ಪ್ರಮಾಣ ಪತ್ರದಲ್ಲಿ ಆಸ್ತಿ ಮುಚ್ಚಿಟ್ಟ ಪ್ರಕರಣ ಸಂಬಂಧ ಅವರು ಪ್ರತಿಕ್ರಿಯಿಸಿದರು. ಜಸ್ಟ್ ನಾಲ್ಕು ತಿಂಗಳು ಕಾದು ನೋಡಿ, ಆಮೇಲೆ ಮಾತನಾಡುತ್ತೇನೆ ಎಂದರು.

ನೋಡಕ್ಕೆ ಹೋದ್ರೆ ಪ್ರಜ್ವಲ್ ರೇವಣ್ಣ ಕೇಸ್‌ನಲ್ಲಿ ಅಷ್ಟೊಂದು ನ್ಯೂನತೆಯಿರಲಿಲ್ಲ. ಆದರೆ ಶ್ರೇಯಸ್ ಪಟೇಲ್ ಕೇಸ್‌ನಲ್ಲಿ ಭಾರೀ  ನ್ಯೂನತೆಯಿದೆ ಎಂದರು.

ಸೂರಜ್ ರೇವಣ್ಣ ಪ್ರಕರಣ ಆಗಿರಬಹುದು ಅಥವಾ ಎಚ್‌ಡಿ ರೇವಣ್ಣ ವಿರುದ್ಧದ ಪ್ರಕರಣಕ್ಕೆ ಸುಪ್ರೀಂಕೋರ್ಟ್‌ನಲ್ಲಿ ತಡೆಯಾಗಿದೆ ಹೊರತು ನಾನು ಇದರಲ್ಲಿ ಯಶಸ್ವಿಯಾಗಿದ್ದೇನೆ ಎಂದು ದೇವರಾಜೇಗೌಡ ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಕಮರಿಗೆ ಉರುಳಿದ 32 ಸೇನೆ ಸಿಬ್ಬಂದಿ ಇದ್ದ ಬಸ್‌, ಮೂವರು ದುರ್ಮರಣ