ಇದು ಹಾರಾಡುವ ಹೊಟೇಲ್. ಅಣುಶಕ್ತಿ ಚಾಲಿತ ಬೃಹತ್ 'ಫ್ಲೈಯಿಂಗ್ ಹೋಟೆಲ್' ಸಿದ್ಧಗೊಂಡಿದ್ದು, ಇದರಲ್ಲಿ ಜಿಮ್ ಮಾತ್ರವಲ್ಲದೆ ಈಜುಕೊಳದಂತಹ ಐಷಾರಾಮಿ ಸೌಲಭ್ಯಗಳೂ ಇರಲಿದೆ.ಈ ಹಾರುವ ಹೊಟೇಲ್ನಲ್ಲಿ 5000 ಪ್ರಯಾಣಿಕರು ತಂಗಲು ಸಾಧ್ಯವಾಗುತ್ತದೆ. ಸ್ಕೈ ಕ್ರೂಸ್ ಹಡಗಿನ ಯೆಮೆನ್ ಇಂಜಿನಿಯರ್ ಹಶೆಮ್ ಅಲ್-ಘಾಲಿ ಅವರು YouTube ಗೆ ಪೋಸ್ಟ್ ಮಾಡಿದ CGI ವೀಡಿಯೊದಲ್ಲಿ ಮೋಡಗಳ ಮಧ್ಯೆ ಬಾಹ್ಯಾಕಾಶ ಹಾರಾಡುತ್ತಿರುವ ವಿಮಾನವನ್ನು ಕಾಣಬಹುದು. ಇದರ ಒಳ ವಿನ್ಯಾಸವು ಯಾವ 5 ಸ್ಟಾರ್ ಹೋಟೆಲ್‌ಗಿಂತಲೂ ಕಡಿಮೆಯಿಲ್ಲ. ಇದು ಶಾಪಿಂಗ್ ಮಾಲ್, ಜಿಮ್, ಈಜುಕೊಳ, ರೆಸ್ಟೋರೆಂಟ್, ಬಾರ್, ಸ್ಪೋರ್ಟ್ಸ್ ಸೆಂಟರ್, ಸಿನಿಮಾ ಮಾತ್ರವಲ್ಲದೆ ಮಕ್ಕಳ ಆಟದ ಮೈದಾನ ಮತ್ತು ಥಿಯೇಟರ್ ಅನ್ನು ಸಹ ಹೊಂದಿರುತ್ತದೆ. ಸ್ಕೈ ಕ್ರೂಸ್ ಹೋಟೆಲ್ ಪ್ರತ್ಯೇಕ ವಿಭಾಗದಲ್ಲಿ ಕಾನ್ಫರೆನ್ಸ್ ಕೇಂದ್ರವನ್ನು ಹೊಂದಿದೆ. ಈ ವಿಮಾನದ ಕೋಣೆಯಲ್ಲಿ ಬಾಲ್ಕನಿಯನ್ನು ಸಹ ವಿನ್ಯಾಸಗೊಳಿಸಲಾಗಿದೆ.