Publish Date: Tue, 24 Apr 2018 (10:37 IST)
Updated Date: Tue, 24 Apr 2018 (14:43 IST)
ಮೈಸೂರು: ಸಚಿವ ಎಚ್ ಸಿ ಮಹದೇವಪ್ಪ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇಂದು ಬೆಳ್ಳಂ ಬೆಳಿಗ್ಗೆಯೇ ಅಧಿಕಾರಿಗಳು ಸಚಿವರ ನಿವಾಸಕ್ಕೆ ದಾಳಿ ಮಾಡಿದ್ದಾರೆ.
ಮೈಸೂರಿನ ವಿಜಯನಗರದಲ್ಲಿರುವ ಸಚಿವರ ನಿವಾಸಕ್ಕೆ ಆಗಮಿಸಿರುವ ಐಟಿ ಅಧಿಕಾರಿಗಳ ದಂಡು ದಾಳಿ ನಡೆಸಿ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.
ದಾಳಿ ವೇಳೆ ಸಚಿವರು ನಿವಾಸದಲ್ಲಿಯೇ ಇದ್ದರು ಎನ್ನಲಾಗಿದೆ. ರಾಜ್ಯ ಸರ್ಕಾರದ ಸಚಿವರಾಗಿರುವ ಮಹದೇವಪ್ಪ ಸಿಎಂ ಸಿದ್ದರಾಮಯ್ಯಗೆ ಪರಮಾಪ್ತರೂ ಹೌದು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.