Publish Date: Wed, 24 Apr 2024 (18:50 IST)
Updated Date: Wed, 24 Apr 2024 (18:56 IST)
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿಕೆ ಸುರೇಶ್ ಅವರ ಆಪ್ತರಾಗಿರುವ ಕೋಣನಕುಂಟೆ ಬ್ಲಾಕ್ ಮಾಜಿ ಕಾರ್ಪೊರೇಟರ್ ಗಂಗಾಧರ್ ಎಂಬುವವರ ಮನೆ ಸೇರಿದಂತೆ ಒಟ್ಟು ಆರು ಕಡೆಗಳಲ್ಲಿ ಇಂದು ಐಟಿ ಅಧಿಕಾರಿಗಳು ದಾಳಿ ನಡೆಸಿದರು.
ಸತತ 8 ಗಂಟೆಗಳಿಂದ ವಿವಿದ ಕಡೆಗಳಲ್ಲಿ ಐಟಿ ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದಾರೆ. ಐಟಿ ದಾಳಿ ವಿರೋಧಿಸಿ ಗಂಗಾಧರ್ ಮನೆ ಮುಂದೆ ಕಾಂಗ್ರೆಸ್ ಕಾರ್ಯಕರ್ತರು ಆಗಮಿಸಿ ಧರಣಿ ನಡೆಸಿದ್ದಾರೆ. ಜೊತೆಗೆ ಡಿಕೆ ಸುರೇಶ್ ಅವರನ್ನು ಟಾರ್ಗೆಟ್ ಮಾಡಿ ಅವರ ಆಪ್ತರ ಮೇಲೆ ಐಟಿ ದಾಳಿ ಮಾಡುತ್ತಿದ್ದಾರೆ ಎಂದು ಪೊಲೀಸರ ಜೊತೆ ವಾಗ್ವಾದ ನಡೆಸಿದ್ದಾರೆ.
ಇನ್ನು ಡಿಕೆ ಸುರೇಶ್ ಆಪ್ತರ ಮೇಲೆ ಹಲವು ಐಟಿ ದಾಳಿಗಳು ಆಗಿದ್ದು, ಕಾಂಗ್ರೆಸ್ ಮುಖಂಡ ಗಂಗಾಧರ್ ಜೊತೆ ಗೊಟ್ಟಿಗೆರೆ ಬ್ಲ್ಯಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀಧರ್, ಡಿ ಕೆ ಸುರೇಶ್ ಆಪ್ತ ಸಹಾಯಕ ಸುಜಯ್, ಚಂದ್ರು, ಲಕ್ಷ್ಮಣ್, ಬಾಬು ಸೇರಿ ಹಲವಾರು ಜನರ ಮೇಲೆ ಐಟಿ ದಾಳಿ ನಡೆದಿದೆ.
ಈ ಹಿನ್ನಲೆ ಕೋಣನಕುಂಟೆ, ಅಂಜಾನಪುರ ಹಾಗೂ ಅವಲಹಳ್ಳಿ ಭಾಗದಲ್ಲಿ ಬೆಳಿಗ್ಗೆಯಿಂದ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.